ಎರಡನೇ ತಂಡದ ಗಜಪಡೆಗೆ ತೂಕ ಪರಿಶೀಲನೆ

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಎರಡನೇ ತಂಡದ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಯಿತು.

ನಿನ್ನೆಯಷ್ಟೇ ಕಾಡಿನಿಂದ ಅರಮನೆಯ
ಅಂಗಳಕ್ಕೆ ಪ್ರವೇಶ ಮಾಡಿದ್ದ ಎರಡನೇ ತಂಡದ 5 ಆನೆಗಳಿಗೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರಿಶೀಲನೆ ಮಾಡಲಾಯಿತು.

ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡುವುದು,
ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಮಾಡಿಸಿ ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.

ಎರಡನೇ ತಂಡದ ಆನೆಗಳ ತೂಕದ ವಿವರ:
ಹೇಮಾವತಿ 2440- ಕೆಜಿ
ಶ್ರೀಕಂಠ- 5540
ಸುಗ್ರೀವ- 5545
ರೂಪ- 3320
ಗೋಪಿ+ 4990 ಕೆಜಿ ತೂಗುತ್ತಿವೆ.

ಮೊದಲ ಹಂತದ ಆನೆಗಳ ತೂಕದ ವಿವರ
ಅಭಿಮನ್ಯು – 5,360
ಧನಂಜಯ – 5,310
ಕಾವೇರಿ – 3,010
ಲಕ್ಷ್ಮೀ – 3,730
ಭೀಮ – 5,465
ಏಕಲವ್ಯ – 5,305
ಮಹೇಂದ್ರ – 5,120
ಕಂಜನ್ – 4,880
ಪ್ರಶಾಂತ – 5,110 ಕೆಜಿ.