ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಎರಡನೇ ದಿನ ನಾಡು, ನುಡಿಯ ಸೊಬಗನ್ನು ಯುವ ಸಂಭ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.
ವಿವೇಕಾನಂದ ಪ್ರಿಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ನೃತ್ಯಕ್ಕೆ ಹೆಜ್ಜೆ ಹಾಕಿ ನಮ್ಮ ಭಾಷೆಯ ಬಗ್ಗೆ ಗೌರವ ತೋರಿಸಿದರು, ಡಿ ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯ ಪ್ರದರ್ಶನ ಮಾಡಿದರು.
ಇತ್ತೀಚಿಗಷ್ಟೆ ಬಿಡುಗಡೆಯಾದ ಏಳುಮಲೆ ತಂಡ ಹಾಗೂ ಚಿತ್ರದ ನಾಯಕ ನಟ ಯುವಜನರನ್ನು ನೋಡಿ ತುಂಬಾ ಸಂತಸ ಪಟ್ಟರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಶಾಸಕರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಯುವ ಸಂಭ್ರಮ ಒಂದು ಪದ್ದತಿಯೇ ಆಗಿದೆ. ಬಹಳ ಉತ್ಸಾಹದಿಂದ ಯುವಕರು ಯುವ ಸಂಭ್ರಮವನ್ನು ಅನುಭಸುತ್ತಿದ್ದಾರೆ ಎಂದು ಹೇಳಿದರು.
ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊಬೈಲ್ ನಿಂದ ಯುವಕರ ನಡಿಗೆ ಪುಸ್ತಕದ ಕಡೆಗೆ ಎಂಬ ನೃತ್ಯ ಮಾಡಿ ಅರಿವು ಮೂಡಿಸಿದರು. ಶ್ರೀ ಆದಿಕುಂಚನಗಿರಿ ಪದವಿ ಪೂರ್ವ ಕಾಲೇಜಿನ ತಂಡ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಕುರಿತು ನೃತ್ಯ ಪ್ರದರ್ಶಿಸಿದರು.
ಮೈಸೂರಿನ ಎಸ್ ಎನ್ ಜಿ ಯು ಕಾಲೇಜ್ ಕಾರಣಕುಪ್ಪೆ ತಂಡದವರು ಅರ್ಜುನ ಆನೆ ಕುರಿತು ಮಾಡಿದ ನೃತ್ಯ ಪ್ರದರ್ಶನ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು, ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆತ್ಮಹತ್ಯೆ ಯಿಂದ ಆಗುವ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ 58 ನೃತ್ಯ ಪ್ರದರ್ಶನವನ್ನು ಮಾಡಲಾಯಿತು. ಮೈಥಾಲಿಜಿ, ನಶಮುಕ್ತ ಭಾರತ, ಕನ್ನಡ ವೈಭವ, ಶಾಸ್ತ್ರೀಯ ಕಲೆಗಳು, ಇತಿಹಾಸ ಪೌರಾಣಿಕ, ವಿಶೇಷ ಚೇತನರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ,ಭಾರತೀಯ ಯೋಧರ ಪಾತ್ರ, ರಾಷ್ಟ್ರೀಯ ಭಾವ್ಯಕ್ಯತೆ, ಪರಿಸರ ಸಂರಕ್ಷಣೆ, ಮೈಸೂರು ಮಹಾರಾಜರ ಕೊಡುಗೆ ಸೇರಿದಂತೆ ವಿವಿಧ ಥೀಮ್ ಗಳಿಗೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರ ಮನ ರಂಜಿಸಿದರು.