ಮೈಸೂರು, ಆ.23: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಿದ್ದ ಹಾಲಿನ ಪೌಡರ್ ಪ್ಯಾಕೇಟ್ ಕದ್ದೊಯ್ದಿದ್ದ ಮುಖ್ಯ ಶಿಕ್ಷಕನನ್ನು ಅಮಾನತುಪಡಿಸಲಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ನನ್ನು ಅಮಾನತು ಪಡಿಸಲಾಗಿದೆ.
ಇದೇ ಸೋಮವಾರ ಶಾಲೆಯಲ್ಲಿದ್ದ ಹತ್ತು ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಕದ್ದೊಯ್ಯುತ್ತಿದ್ದಾಗ ಗ್ರಾಮಸ್ಥರೇ ಗಣೇಶ್ ನನ‌್ನು ರೆಡ್ ಹ್ಯಾಂಡ್ ಹ್ಯಾಂಡ್ ಆಗಿ ಹಿಡಿದಿದ್ದರು.
ದ್ವಿಚಕ್ರವಾಹನದ ಬ್ಯಾಗ್ ನಲ್ಲಿ 3 ಪ್ಯಾಕೇಟ್ ಮತ್ತು ಟೂಲ್ ಬಾಕ್ಸ್ ನಲ್ಲಿ 7 ಪ್ಯಾಕೇಟ್ ಸೇರಿ ಒಟ್ಟು 10 ಹಾಲಿನ ಪುಡಿ ಪ್ಯಾಕೇಟ್ ಕದ್ದೊಯ್ಯುತ್ತಿದ್ದಾಗ ಗ್ರಾಮದ ಜನರೇ ಗಣೇಶ್ ನನ್ನು ಹಿಡಿದಿದ್ದರು.
ಪಟ್ಟಣದ ನಿವಾಸಿ ಸಿಂಗರ್ ಸಿದ್ದರಾಜು ಮತ್ತಿತರರು ಶಿಕ್ಷಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದರು.
ಹಾಲಿನ ಪುಡಿ ಪ್ಯಾಕೇಟ್ ಗಳು
ಅವದಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಮುಖ್ಯ ಶಿಕ್ಷಕ ಗಣೇಶ್ ಸಮರ್ಥನೆ ನೀಡಿದ್ದ, ಆದರೆ ಪ್ಯಾಕೇಟ್ ಗಳನ್ನು ಪರಿಶೀಲನೆ ಮಾಡಿದಾಗ ಡಿಸೆಂಬರ್ 24 ರ ವರೆಗೂ ಅವಧಿ ಇರುವುದು ಬೆಳಕಿಗೆ ಬಂದಿತ್ತು.
ಸ್ಥಳಕ್ಕಾಗಮಿಸಿದ್ದ ಬಿ ಆರ್ ಸಿ ಕೃಷ್ಣಯ್ಯ ಮತ್ತು ಸಿಬ್ಬಂಧಿ ಪರಿಶೀಲನೆ ನಡೆಸಿ,
ಹಾಲಿನ ಪುಡಿ ಪ್ಯಾಕೇಟ್ ಸಮೇತ ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದರು.
ನಂತರ ತಾಲೋಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೃಷ್ಣಯ್ಯ ತಿಳಿಸಿದ್ದರು.
ಅವರು ಈ ಬಗ್ಗೆ ನೀಡಿದ್ದ ದೂರು ಆಧರಿಸಿ ಡಿಡಿಪಿ ಐ, ಶಿಕ್ಷಕ ಗಣೇಶ್ ನನ್ನು ಅಮಾನತುಮಾಡಿ ಆದೇಶ ಹೊರಡಿಸಿದ್ದಾರೆ.