ಶಿಕ್ಷಣದ ಮೂಲಕ ಸಾವಿರಾರು ದೀಪಗಳನ್ನು ಹಚ್ಚಿದ ಸಾವಿತ್ರಿ ಬಾಯಿ ಪುಲೆ:ನಜರ್ ಬಾದ್ ನಟರಾಜ್

ಮೈಸೂರು: ಶಿಕ್ಷಣದ ಮೂಲಕ ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ,ಅವರಿಗೆ ನಾವು ಎಂದಿಗೂ ಚಿರಋಣಿಯಾಗಿರಬೇಕು ಎಂದು
ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್
ಹೇಳಿದರು.

ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ 194ನೇ ಜಯಂತೋತ್ಸವ ಪ್ರಯುಕ್ತ ಇಂದು ಮೈಸೂರಿನ ನಜರಬಾದ್ ನ ಚಾಮುಂಡೇಶ್ವರಿ ಬಳಗದ ಕಚೇರಿಯಲ್ಲಿ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ
ಪುಷ್ಪ ನಮನ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ಇಂದಿನ ಅಕ್ಷರಸ್ಥ ಭಾರತೀಯರ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ ಎಂದು ಅವರು ವರ್ಣಿಸಿದರು.

ಸೇವಾದಾಳದ ಮೋಹನ್ ಕುಮಾರ್ ಮಾತನಾಡಿ,ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟು ಸಮಾಜಕ್ಕೆ ಶಿಕ್ಷಣದ ಮೂಲಕ ಕಾಣಿಕೆ ನೀಡಿ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ ಭಾರತದ ಮಹಾನ್ ಚೇತನ ಎಂದು ನುಡಿದರು.

ಕಾಂಗ್ರೆಸ್ ಹಿಂದುಳಿದ ವರ್ಗದ ಉಪಧ್ಯಕ್ಷ ರಮೇಶ್ ರಾಮಪ್ಪ ಅವರು ಮಾತನಾಡಿ, ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಚಾಮುಂಡೇಶ್ವರಿ ಬಳಗದ ಲೋಕೇಶ್, ಮಂಜುನಾಥ್ ಮರಾಟಿಕ್ಯಾತನಹಳ್ಳಿ, ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಸುನಿಲ್ ನಾರಾಯಣ್ ಮತ್ತು ನರಸಿಂಹ ಉಪಸ್ಥಿತರಿದ್ದರು.