ಮೈಸೂರು: ಬೆಂಗಳೂರಿನ ಉತ್ತರಾಧಿ ಮಠದ ಜಯತೀರ್ಥ ವಿದ್ಯಾಪೀಠದ ಮುಖ್ಯಸ್ಥರಾದ ಸತ್ಯಧ್ಯಾನಕಟ್ಟಿ ಅವರು ಮೈಸೂರಿಗೆ ಭೇಟಿ ನೀಡಿದ್ದರು.
ಮೈಸೂರಿನ ರೈಲ್ವೇ ಕ್ರೀಡಾಂಗಣದ ಎದರುಗಡೆ ಇರುವ ಶ್ರೀ ಮಾರುತಿ ದೇವಾಲಯಕ್ಕೆ ಸತ್ಯಧ್ಯಾನಕಟ್ಟಿ ಅವರು ಭೇಟಿ ನೀಡಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಸ್ವಾಮಿಯ ದರ್ಶನ ಪಡೆದುಕೊಂಡರು.

ಈ ವೇಳೆ ಸತ್ಯಧ್ಯಾನಕಟ್ಟಿ ಅವರನ್ನು ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಭೇಟಿ ಮಾಡಿ ಫಲ ತಾಂಬೂಲ ನೀಡಿ ಶಾಲು ಹೊದಿಸಿ ಗೌರವಿಸಿದರು.
