ಮೈಸೂರು, ಮಾ.12: ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಾಪಾರಿಯಾಗಿ ಹಲವಾರು ಮುಸ್ಲಿಂ ಸಮುದಾಯದವರಿಗೂ ಕೆಲಸ ನೀಡುತ್ತಿರುವ ಸತೀಶ ಅವರು ಉರ್ದು ತಿಳಿಯದೇ ಯಾರೋ ಕಳುಹಿಸಿದ್ದ ಪೋಸ್ಟರನ್ನ ಬಳಸಿದ್ದಕ್ಕೆ ಜೈಲಿಗೆ ಹೋಗಿ ಬರುವಂತಾದುದು ದುರಾದೃಷ್ಟವೇ ಸರಿ.
ವ್ಯಾಪಾರಿಯಾಗಿ ಹಲವಾರು ವರ್ಷದಿಂದ ಬಹಳಷ್ಟು ಜನರಿಗೆ ಅದರಲ್ಲೂ ಮುಸ್ಲಿಂ ಸಮುದಾಯದವರಿಗೂ ಕೆಲಸ ಕೊಟ್ಟು ಅರಿವಿಲ್ಲದೇ ಮಾಡಿದ ತಪ್ಪಿಗೆ ಶಿಕ್ಷೆಗೆ ಒಳಪಟ್ಟಿದ್ದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಬೇಸರ ಪಟ್ಟಿದ್ದಾರೆ.
ಇಂದು ಪೋಲೀಸರು ಸತೀಶ ಅವರನ್ನು ಗಡಿಪಾರು ಮಾಡಬೇಕೆಂದು ಆಲೋಚಿಸುತ್ತಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿಷಾದಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸತೀಶ್ ಈ ಎಲ್ಲಾ ವಿಷಯದ ಬಗ್ಗೆ ಆದ ಮಾಹಿತಿ ನೀಡಿ ವಿಷಾದ ವ್ಯಕ್ತಪಡಿಸಿದರೂ ಕೂಡಾ ಪೋಲೀಸರು ಕ್ರಮ ವಹಿಸಲು ಮುಂದಾಗಿರುವುದು ಯಕ್ಷ ಪ್ರಶ್ನೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್
ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತೀಶ ಅವರೇ ಆದ ಅಚಾತುರ್ಯಕ್ಕೆ ಬೇಸರ ವ್ಯಕ್ತಪಡಿಸಿರುವುದು ಸಾಕಲ್ಲವೇ ಅವರು ಉರ್ದು ಬಾಷೆ ತಿಳಿಯದೇ ಯಾರೋ ಕಳುಹಿಸಿದ ಪೋಟೋ ಹಾಕಿರುವುದಾಗಿ ತಿಳಿಸಿಲ್ಲವೆ ಎಂದು ಕಾಮತ್ ಪ್ರಶ್ನಿಸಿದ್ದಾರೆ.
ಇಷ್ಟು ವರ್ಷ ಜಾತಿ ಧರ್ಮ ನೋಡದೇ ಕೆಲಸ ನೀಡಿರುವುದು ತಪ್ಪೇ, ಹಾಗಾದರೆ ಪೋಲೀಸರಿಗೆ ಯಾರ ಒತ್ತಡವಿದೆ ಡ್ರೈ ಪ್ರೂಟ್ ವ್ಯಾಪಾರಸ್ತರೇನಾದರೂ ಒತ್ತಡ ಹಾಕಿರಬಹುದೇ ಎಂದು ಕೆ ಮಹೇಶ ಕಾಮತ್ ಪ್ರಶ್ನಿಸಿದ್ದಾರೆ.
ಪೋಲೀಸರು ಈ ವಿಷಯಕ್ಕೆ ಕೂಡಲೇ ಇತಿಶ್ರೀ ಹಾಕಬೇಕು ಹಾಗೂ ಸತೀಶ್ ಅವರು ಯಾರ ಭಯದ ಇಲ್ಲದೆ ಮುಕ್ತವಾಗಿ ವ್ಯಾಪಾರ ಮಾಡಲು ಸಹಕರಿಸಬೇಕು ಗಡೀಪಾರು ಯೋಚನೆ ಬಿಡಬೇಕು ಎಂದು ಅವರು ಆಗ್ರಹಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ವಿಷಯವನ್ನು ಇಲ್ಲೇ ಮುಗಿಸಿ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸಲು ಪ್ರೇರೇಪಿಸಬೇಕು ಎಂದು ಕೆ ಮಹೇಶ ಕಾಮತ್ ಮನವಿ ಮಾಡಿದ್ದಾರೆ.
