ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಭಾರತದ ಪ್ರಥಮ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.
ಕೆ ಆರ್ ಮೊಹಲ್ಲಾದ ಸೀತಾರಾಮ ರಾವ್ ರಸ್ತೆ ಯಲ್ಲಿರುವ ಕಚೇರಿಯಲ್ಲಿ ಸರೋಜಿನಿ ನಾಯ್ಡು ಅವರ ಜನ್ಮ ದಿನಾಚರಣೆ ಅಂಗವಾಗಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಲಾಯಿತು.
ಸರೋಜಿನಿ ನಾಯ್ಡು ಅವರ ಜನ್ಮದಿನವನ್ನು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಕೊಡುಗೆಗಳನ್ನು ಮುಖಂಡರು ಸ್ಮರಿಸಿದರು.
ಕಾರ್ಯಕ್ರಮ ದಲ್ಲಿ
ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಸವಿತಾ ಘಾಟ್ಕೆ, ಸಾಮಾಜಿಕ ನ್ಯಾಯವೇದಿಕೆ ಮೈಸೂರು ವಿಭಾಗ ಸಂಚಾಲಕರಾದ ಸತೀಶ್ ಮೇತ್ರಿ, ಕಾರ್ಯದರ್ಶಿ ಪರಮಾನಂದ ಎಂ. ಎಸ್, ಮಹಾನ್ ಶ್ರೇಯಸ್, ಹೇಮಾ,
ಮತ್ತಿತರರು ಹಾಜರಿದ್ದರು.
