ಮೈಸೂರು:ಕಿರಾಳು ಗ್ರಾಮದ ಸಂತೋಷ್ ಕಿರಾಳು ಅವರು ಶ್ರೀ ವೀರ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ
ನಗರದ ನಜರ್ಬಾದ್ ನಲ್ಲಿರುವ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಶ್ರೀ ವೀರ ಮಡಿವಾಳರ ಸಂಘದ ನೂತನ ಅಧ್ಯಕ್ಷರೂ ಯುವ ನಾಯಕರಾದ ಸಂತೋಷ್ ಕಿರಾಳು ರವರನ್ನು ಸಮಾಜದ ಮುಖಂಡರು ಅಭಿನಂದಿಸಿದರು
ಈ ಸಂದರ್ಭದಲ್ಲಿ ಶ್ರೀ ವೀರ ಮಡಿವಾಳರ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾದ ಜಿ. ಎಸ್ ಸತ್ಯ ನಾರಾಯಣ, ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು, ಬಿ.ಜಿ ಕೇಶವ್, ಡಿ ಚಂದ್ರು ,ಮಹೇಶ್, ಜಗದೀಶ್, ಮಂಜು ಶೆಟ್ಟಿ,ಸ್ವಾಮಿ ಶ್ರೀರಾಮ್, ಮಹೇಶ್, ವೆಂಕಟೇಶ್ ಗುಂಡ,ಚಿಲ್ಕುಂದ ರವಿ, ರಾಘು ,ರಂಗಸ್ವಾಮಿ ಹೆಚ್ ಡಿ ಕೋಟೆ ಮತ್ತಿತರ ಮುಖಂಡರು ಸಂತೋಷ್ ಅವರಿಗೆ ಅಭಿನಂದಿಸಿ ಶುಭ ಕೋರಿದರು.