ಮೈಸೂರು: ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಅಪಾರ ಜಿಲ್ಲಾಧಿಕಾರಿ ಡಾ.ಶಿವರಾಜ್ ಅವರು ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು.

ಫೆಬ್ರವರಿ 20 ರಂದು ಸಂತ ಕವಿ ಸರ್ವಜ್ಞ ಜಯಂತಿ ಆಚರಣೆಯ ಕಾರ್ಯಕ್ರಮ ನಡೆಯಲಿದ್ದು,ಹಲವು ಮುಖಂಡರೊಂದಿಗೆ ಅಪರ ಜಿಲ್ಲಾಧಿಕಾರಿಗಳು ರೂಪುರೇಷೆ ಕುರಿತು ಚರ್ಚಿಸಿದರು.
ಈ ಸಭೆಯಲ್ಲಿ ಯದುನಂದನ್, ರೇಣುಕಂಬಾ, ಯಶವಂತ ಕುಮಾರ್, ನಾಗರಾಜು, ವರ್ಷ, ವಾಸು, ವಿಶ್ವೇಶ್ವರ, ಚಂದ್ರು, ವಾಸು, ಬಾಲಕೃಷ್ಣ, ವೆಂಕಟೇಶ್ ಹಾಗೂ ಕುಂಬಾರ ಸಂಘದ ಪ್ರಮುಖರು ಭಾಗವಹಿಸಿದ್ದರು.