ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ-ಪ್ರಕಾಶ್ ಪ್ರಿಯದರ್ಶನ್

Spread the love

ಮೈಸೂರು: ಕಿತ್ತೂರು ಸಂಸ್ಥಾನದ ರಕ್ಷಣೆಗೆ ನಿಂತ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶೂರ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಬಣ್ಣಿಸಿದರು.

ನಗರದ ಕುವೆಂಪು ನಗರ ಎಂ ಬ್ಲಾಕ್ ನಲ್ಲಿರುವ ಬೆಳಕು ವಾತ್ಸಲ್ಯ ದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ಹಾಗೂ ದಿನಸಿ ಸಾಮಗಳನ್ನು ವಿತರಿಸುವ ಮೂಲಕ 76ನೇ ಗಣರಾಜ್ಯೋತ್ಸವ ಆಚರಿಸಿ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ಸ್ಮರಿಸಲಾಯಿತು.

ಈ ಕಾರ್ಯಕ್ರಮದ ವೇಳೆ ಮಾತನಾಡಿದ ಪ್ರಕಾಶ್ ಪ್ರಿಯದರ್ಶನ್,
ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದು, ಅದರಲ್ಲಿ ರಾಯಣ್ಣನ ಪಾತ್ರ ಬಹಳ ಮಹತ್ವದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಬ್ರಮಣಿ,ವೀರಭದ್ರ ಸ್ವಾಮಿ, ಯಶ್ವಂತ್ ಕುಮಾರ್,ಮಹದೇವ್, ಶ್ರೀಧರ್ ,ಮಹೇಶ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.