ರಾಯಣ್ಣನ ದೇಶಪ್ರೇಮ,ಆದರ್ಶ, ಸಂದೇಶ ಯುವ ಜನಾಂಗಕ್ಕೆ ಪ್ರೇರಣೆ:ಹರೀಶ್ ಗೌಡ

Spread the love

ಮೈಸೂರು: ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ ಎಂದು ಶಾಸಕ ಹರೀಶ್ ಗೌಡ ಹೇಳಿದರು.

ಮೈಸೂರು ಯುವ ಬಳಗದ ವತಿಯಿಂದ ಸದ್ವಿದ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ 194 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ, ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು ಎಂದು ಕರೆ ನೀಡಿದರು.

ಬ್ರಿಟೀಷರ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ. ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಹರೀಶ್‌ ಗೌಡ ಸಲಹೆ ನೀಡಿದರು.

ಹರೀಶ್‌ಗೌಡ ಸೇರಿದಂತೆ ಗಣ್ಯರು
ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮೇಣದಬತ್ತಿ ಬೆಳಗಿಸಿ ಸ್ಮರಿಸಿದರು.

ಕಾರ್ಯಕ್ರಮ ದಲ್ಲಿ ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಮೈಸೂರು ಯುವ ಬಳಗದ ಅಧ್ಯಕ್ಷ ರವಿಚಂದ್ರ, ಉದ್ಯಮಿ ವಕ್ತಾರಾಮ್, ಸಂದೀಪ್, ನಾಗಣ್ಣ,ಹರೀಶ್ ಗೌಡ, ನವೀನ್,ಲೋಕೇಶ,ನಂಜುಂಡಸ್ವಾಮಿ, ಚಂದ್ರಶೇಖರ,ಮಂಜುಳಾ, ಶಾಂತ, ಮಂಗಳ, ಮಂಜುನಾಥ್, ಜಗದೀಶ್ ,ಶ್ರೀಕಾಂತ್, ಮನು, ಮಹಾನ್ ಶ್ರೇಯಸ್, ಗುರುರಾಜ್ ಶೆಟ್ಟಿ, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.