ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಂಚಾರ ಸಾಥಿ ಬಗ್ಗೆ ಜಾಗೃತಿ

Spread the love

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ನಿಮ್ಮ ಡಿಜಿಟಲ್ ಸುರಕ್ಷತೆ ನಮ್ಮ ಆದ್ಯತೆ ಎಂಬ ಕೇಂದ್ರ ಸರ್ಕಾರದ ದೂರಸಂಪರ್ಕದ ಆಶಯದೊಂದಿಗೆ ಚಾ.ನಗರದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ಸ್ ವಿಭಾಗದ ೮ ವಿದ್ಯಾರ್ಥಿಗಳು ಜಾಗೃತಿ ಅರಿವಿಗಾಗಿ ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.

ಪಟ್ಟಣದ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ , ಉದ್ಯಾನವನ,ಶಾಲಾ ಕಾಲೇಜುಗಳು, ಅಷ್ಟೆ ಅಲ್ಲ ಮೈಸೂರಿನ ದಸರದಲ್ಲೂ ಭಾಗವಹಿಸಿ ಸಂಚಾರ ಮಿತ್ರ ಸ್ಕೀಂ.೨.೦ ನ ಸಂಚಾರ ಸಾಥಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ‌

ಸಂಚಾರ ಸಾಥಿಯಲ್ಲಿ ಮೊಬೈಲ್ ಕಳವು , ಬಿದ್ದು ಹೋದಾಗ ಅನುಸರಿಸಬೇಕಾದ ಮಾರ್ಗಗಳು, ಅದರೊಳಗೆ ಬಳಸಬಯಸಿದ ಸಿಮ್ ಹಾಗೂ ಮಾಲೀಕತ್ವ,ಮಾಲೀಕತ್ವದ ಹೆಸರಲ್ಲಿ ಇರದ ಸಿಮ್ ರದ್ದು ಮಾಡುವ , ವರದಿ ಮಾಡುವ ಬಗ್ಗೆ ತಿಳುವಳಿಕೆ ಮೂಡಿಸಿದರು.

ಚಾಮರಾಜನಗರ ಇಂಜಿನಿಯರಿಂಗ್ ಕಾಲೇಜು ಸಮೀಪ ಇರುವ ಇಂಜಿನಿಯರಿಂಗ್ ಕಾಲೇಜಿನ E&C ವಿಭಾಗದ ಮುಖ್ಯಸ್ಥರಾಗಿರುವ ಇಮ್ರಾನ್ ಅವರ ನೇತೃತ್ವದ ಈ ತಂಡದಲ್ಲಿ ಐಶ್ವರ್ಯ, ಪಲ್ಲವಿ,ಸುಸ್ಮಿತಾ, ಕೀರ್ತನಾ, ಭಾವನಾ,ಐಶ್ವರ್ಯ, ತೇಜಸ್ವಿನಿ,ಯಶಸ್ವಿನಿ ಎಂಬ ಎಂಟು ಮಕ್ಕಳು ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಯಾವುದೆ ಪ್ರತಿಪಲಾಪೇಕ್ಷೆ ಇಲ್ಲದೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.