ಮೈಸೂರು: ದೇಶದಲ್ಲಿ ಮುಸಲ್ಮಾನರಿಗೆ ವಕ್ಫ ಬೋರ್ಡ ಹಾಗೂ ಕ್ರೈಸ್ತರಿಗೆ ಅವರದೇ ಬೋರ್ಡ ಇದೆ,ಅದೇ ರೀತಿ ಬಹುಸಂಖ್ಯಾತರಾದ ಹಿಂದುಗಳಿಗೆ ಸನಾತನ ಬೋರ್ಡ ಏತಕ್ಕೆ ರಚಿಸಬಾರದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾದ್ಯಕ್ಷ
ಕೆ ಮಹೇಶ ಕಾಮತ್ ಪ್ರಶ್ನಿಸಿದ್ದಾರೆ.
ಭಕ್ತರ ದೇಣಿಗೆಯಿಂದ ದೇವಸ್ಥಾನಗಳು ನಡೆಯುವಂತೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಕೊಡಬೇಕು. ಸರ್ಕಾರವು ಕೇವಲ ಹಿಂದೂ ದೇವಾಲಯ ಮತ್ತು ಹಿಂದೂ ದಾರ್ಮಿಕ ಕೇಂದ್ರವನ್ನು ಮುಜರಾಯಿ ಇಲಾಖೆಗೆ ಒಳಪಡಿಸುವ ಬದಲು ದೇವಸ್ಥಾನದವರಿಗೂ ಆಡಳಿತ ನಡೆಸಲು ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ತಿರುಪತಿ ಪ್ರಸಾದ ಲಡ್ಡುವಿಗೆ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬೆರೆಸಿದ ಘಟನೆ ನಡೆದಿದೆ.
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಮುಸ್ಲೀಂ ಜನರಿಂದ ತುಪ್ಪ ಖರೀದಿಸಿದ ವಿಷಯವನ್ನು ಕೇಂದ್ರ ಸರ್ಕಾರ ಗಂಬೀರವಾಗಿ ಪರಿಗಣಿಸಿ ಸನಾತನ ಬೋರ್ಡ ರಚಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಾಮೀಜಿಗಳಿಗೂ ಕೆಲವು ನಿಭಂದನೆಗಳನ್ನ ಹಾಕಬೇಕು ಯಾವುದೇ ಸ್ವಾಮೀಜಿ ಅನೈತಿಕ ಚಟುವಟಿಕೆಯಲ್ಲಿ ಬಾಗಿಯಾದದ್ದು ಸಾಬೀತಾದ ಕೂಡಲೇ ಅವರಿಗೆ ಕೂಡಲೇ ಆ ಸ್ಥಾನದಿಂದ ತೆಗೆದು ಹಾಕಿ ಸರಿಯಾದವರಿಗೆ ನೇಮಿಸುವಂತೆ ಮಾಡಬೇಕು.
ಹಿಂದುಗಳ ಮೇಲೆ ದೌರ್ಜನ್ಯವಾದಾಗ ಎಲ್ಲಾ ಸ್ವಾಮೀಜಿಗಳು ಹಿಂದುಗಳ ಪರವಾಗಿ ನಿಲ್ಲಲೇಬೇಕು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸಹ ಉಲ್ಲೇಕಿಸಬೇಕು ಎಂದು ಮಹೇಶ್ ಕಾಮತ್ ಒತ್ತಾಯಿಸಿದ್ದಾರೆ.
ದೇವಸ್ಥಾನದ ಆದಾಯವನ್ನ ಕೇವಲ ಹಿಂದೂ ದೇವಾಲಯಗಳ ಅಭಿವ್ರದ್ದಿಗೆ ಉಪಯೋಗಿಸಬೇಕು,ಎಲ್ಲಾ ದೇವಸ್ಥಾನದಲ್ಲಿ ಹಿಂದೂಗಳಿಗೆ ಉಚಿತ ಊಟೋಪಚಾರ ಹಾಗೂ ತಂಗುವ ವ್ಯವಸ್ಥೆ ಮಾಡಿದರೆ ಭಕ್ತರ ಸಂಖ್ಯೆಯೂ ಹೆಚ್ಚುತ್ತದೆ ಹಾಗೆ ಆದಾಯವೂ ಹೆಚ್ಚುತ್ತದೆ ಎಂದು ಕೆ ಮಹೇಶ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.