ಮೈಸೂರು: ವಿಜಯನಗರ ಸಾಮ್ರಾಜ್ಯಕ್ಕೆ ಕೃಷ್ಣದೇವರಾಯರ ಕೊಡುಗೆ ದೊಡ್ಡದು, ಅವರನ್ನು ಸ್ಮರಿಸುವ ಕೆಲಸವನ್ನು ನಾವೆಲ್ಲ ಮಾಡಬೇಕು ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ ಹೇಳಿದರು.
ಸಯಾಜಿ ರಾವ್ ರಸ್ತೆಯಲ್ಲಿರುವ ಸಂಸ್ಕೃತ ಪಾಠ ಶಾಲೆಯಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ
ಹಮ್ಮಿಕೊಂಡಿದ್ದ ಕೃಷ್ಣದೇವರಾಯರ 55ನೇ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ
ಹಣ್ಣು, ಹಂಪಲು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ವಿಜಯನಗರ ಕಾಲದ ಹಂಪಿ ವಿಶ್ವಮಟ್ಟಕ್ಕೆ ಬೆಳೆಯಲು ಹಲವು ರಾಜರು ಶ್ರಮಿಸಿದ್ದು, ಅವರಲ್ಲಿ ಕೃಷ್ಣದೇವರಾಯರ ಸಾಧನೆ ಅಪಾರ. ಹಂಪಿಯಲ್ಲಿ ಬಂಗಾರ, ಮುತ್ತು, ರತ್ನ, ವಜ್ರಗಳ ಮಾರಾಟದ ಮಾರುಕಟ್ಟೆ ನಡೆಸಿ ವಿಜಯನಗರವನ್ನ ಶ್ರೀಮಂತ ಸಾಮ್ರಾಜ್ಯವಾಗಿ ಮಾಡಿದ್ದಾರೆ ಎಂದು ಬಣ್ಣಿಸಿದರು.
ಕೃಷ್ಣದೇವರಾಯ ದೇವಾಲಯ, ಮಂಟಪಗಳು ನಿರ್ಮಾಣ ಮಾಡುವ ಮೂಲಕ ವಾಸ್ತುಶಿಲ್ಪಕ್ಕೆ ಪ್ರಮುಖ ಆದ್ಯತೆ ನೀಡಿದ್ದಾರೆ, ಜೊತೆಗೆ ಸಂಗೀತ, ಕಲೆ, ಕೃಷಿ,ಕರೆ, ಕಾಲುವೆಗಳು ನಿರ್ಮಿಸಿ ಜನರ ಬದುಕು ಹಸನಾಗಲು ಕಾರಣ ಕರ್ತರಾಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಸಂಸ್ಕೃತ ಪಾಠ ಶಾಲೆಯ ಕುಮಾರ್ ಭಟ್ಟರು,ಮಾನವ ಹಕ್ಕು ಆಯೋಗದ ಜಿಲ್ಲಾಧ್ಯಕ್ಷ ಪ್ರಕಾಶ್ ಗೌಡ , ಕ್ರೀಡಾ ತರಬೇತಿದಾರ ಜಗದೀಶ್, ಸುಬ್ರಮಣಿ,ವೀರಭದ್ರ ಸ್ವಾಮಿ, ಭಾಸ್ಕರ್, ಶ್ರೀಧರ್, ಯಶ್ವಂತ್ ಕುಮಾರ್, ಎಂ ಮಾಧವಿ, ಶಾಂತಿ ಪ್ರಿಯ, ನಿಧಿ, ಮನ್ವಿತ್ ಗೌಡ, ದತ್ತ, ಮಹದೇವಸ್ವಾಮಿ,
ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.