ಮೈಸೂರು: ಮೈಸೂರಿನ ನಿರಂತರವಾಗಿ ಮಕ್ಕಳು,ವಿದ್ಯಾರ್ಥಿಗಳಿಗೆ ಹಿರಿಯ ನಾಗರೀಕರಿಗೆ ಸಹಾಯ ಹಸ್ತ ನೀಡುತ್ತಾ ಬರಲಾಗುತ್ತಿದೆ.
ಜತೆಗೆ ಅನಾಥಾಲಯಗಳು,ವೃದ್ದಾಶ್ರಮದ ವಾಸಿಗಳಿಗೆ ಹಣ್ಣು ಮತ್ತಿತರ ತಿನಿಸುಗಳನ್ನು ವಿತರಿಸಲಾಗುತ್ತಿದೆ.
ಈ ಬಾರಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಸರಸ್ವತಿಪುರಂ ನಲ್ಲಿರುವ ಮಹಾಬೋಧಿ ಕರ್ಲ
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಹಣ್ಣುಗಳು,ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.ಇದು 194 ನೆ ಹಣ್ಣು ವಿತರಣಾ ಕಾರ್ಯವಾಗಿದೆ.
ಈ ವೇಳೆ ಮಹಾಬೋಧಿ ಕರ್ಲ ವಿದ್ಯಾರ್ಥಿ ನಿಲಯದ ವಿವೇಕ್, ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ವೀರಭದ್ರ ಸ್ವಾಮಿ, ಚಂದ್ರಶೇಖರ್, ಶ್ರೀಧರ್, ಮಹೇಶ್, ಮಹದೇವ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.