(ವರದಿ: ಪುಟ್ಟಸ್ವಾಮಿ ಹನೂರು)
ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಸಾಲೂರು ಬೃಹ್ಮಠದ ಪಟ್ಟದ ಗುರುಸ್ವಾಮಿಗಳು ಮಂಗಳವಾರ ಲಿಂಗೈಕ್ಯರಾಗಿದ್ದಾರೆ.

ಕರ್ನಾಟಕ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಪಟ್ಟದ ಗುರುಸ್ವಾಮಿಗಳು ಹನೂರು ತಾಲೂಕಿನ ಜಿ.ಕೆ.ಹೊಸೂರು ಗ್ರಾಮದಲ್ಲಿ ಜನಿಸಿದ್ದರು.
ಶ್ರೀಗಳು ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾದಪ್ಪನ ನೆಲದಲ್ಲಿರುವ ಸಾಲೂರು ಬೃಹ್ಮಠಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಸೇರಿದಂತೆ ರಾಜ್ಯ ಅಲ್ಲದೆ ಅನ್ಯ ರಾಜ್ಯಗಳಿಂದ ಬರುವ ಭಕ್ತಾದಿಗಳಿಂದಲೂ ಸಹ ಗುರುಸ್ವಾಮಿಗಳು ಎಂದೆ ಗುರುತಿಸಿ ಕೊಳ್ಳುವ ಮೂಲಕ ಪ್ರಸಿದ್ಧಿಯಾಗಿದ್ದರು.

ರಾಜ್ಯದ ಮೂಲೆ ಮೂಲೆಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ದಾರಿ ದೀಪವಾಗಿದ್ದ ಪಟ್ಟದ ಗುರುಸ್ವಾಮಿಗಳು ಶ್ರೀ ಮಠದಲ್ಲಿ ಅನ್ನದಾನ, ವಿದ್ಯಾದಾನ ಹಲವಾರು ಪುಣ್ಯ ಕಾರ್ಯಗಳನ್ನು ಮಾಡಿ ಇತರರಿಗೆ ದಾರಿ ದೀಪ ವಾಗಿದ್ದಾರೆ.
ಶ್ರೀ ಗಳ ಅಗಲಿಕೆ ಇಡೀ ಚಾಮರಾಜನಗರ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ.
ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿದ್ದ ಶಾಸಕ ಎಂ.ಆರ್.ಮಂಜುನಾಥ್ ಶ್ರೀ ಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳು ನಿಧನರಾಗಿರುವುದು ಭಕ್ತಗಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ಶ್ರೀಗಳು ಸಾಲೂರು ಬೃಹನ್ಮಠದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ, ಹಸಿದು ಬರುವ ಭಕ್ತಾದಿಗಳಿಗೆ ದಾಸೋಹ ಕಲ್ಪಿಸುವ ಮೂಲಕ ಶ್ರೀಕ್ಷೇತ್ರದ 77 ಮಲೆಗಳ ಇತಿಹಾಸ ಪ್ರಸಿದ್ಧ ಧಾರ್ಮಿಕ ಸ್ಥಳದ ಜನತೆಗೆ ದಾರಿ ದೀಪವಾಗಿದ್ದರು. ಶ್ರೀ ಗಳು ಲಿಂಗೈಕ್ಯರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.

ಸಂಜೆ ಅಂತಿಮ ವಿಧಿ ವಿಧಾನಗಳು ನಡೆದವು
ಮಾಜಿ ಶಾಸಕರಾದ ಆರ್. ನರೇಂದ್ರ, ಪರಿಮಳನಾಗಪ್ಪ, ಎಸ್. ಬಾಲರಾಜು, ಮುಖಂಡರುಗಳಾದ ನಿಶಾಂತ್, ಡಾ. ದತ್ತೇಶ್ ಕುಮಾರ್ ಸೇರಿದಂತೆ ವಿವಿಧ ಮಠಗಳ ಹರಗರು ಚರಮೂರ್ತಿಗಳು ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
