ಮೈಸೂರು: ಮೈಸೂರು ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತನ್ನ ಕುಟುಂಬ, ಸ್ನೇಹಿತರು, ಬಂದುಗಳು ಎಲ್ಲವನ್ನೂ ತೊರೆದು ಪಾಕಿಸ್ತಾನಿ ಉಗ್ರರರನ್ನು ಹೊಡೆದುರುಳಿಸಿ, ನೂರಾರು ಜನರನ್ನು ರಕ್ಷಣೆ ಮಾಡಿದ ವೀರ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಸ್ಮರಿಸಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ ಅವರು ಮಾತನಾಡಿ, ನಾನು
ಎನ್ ಎಸ್ ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೊ ನಲ್ಲಿ ಇದ್ದಾಗ ಸಂದೀಪ್ ಉನ್ನಿಕೃಷ್ಣನ್ ಅವರು ನಮಗೆ ಟ್ರೈನಿಂಗ್ ಆಫೀಸರ್ ಆಗಿದ್ದರು ಎಂದು ಸ್ಮರಿಸಿದರು.
ಅವರ ಜೊತೆ ಇದ್ದು ತರಬೇತಿ ಪಡೆದಿದ್ದು ನನಗೆ ಅತ್ಯಂತ ಖುಷಿಯ ವಿಚಾರ. 26/11 ಮುಂಬೈ ತಾಜ್ ಹೋಟೆಲ್ ನಲ್ಲಿ ನಾನು ಒಂದು ಟೀಂ ನಲ್ಲಿ ಕಾರ್ಯಾಚರಣೆ ಮಾಡಿದ್ದು ಹೆಮ್ಮೆ ಎನಿಸಿದೆ, ಇಂತಹ ನಿಜವಾದ ವೀರರನ್ನು ನಾವು ನೆನೆಸುವುದರಿಂದ ನಮಗೆಲ್ಲರಿಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕರು ಅನಿತಾ ಶ್ರೀಧರ, ಅಧ್ಯಾಪಕರು ರವಿ ಎಸ್ ಎಸ್, ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತತ ರುದ್ದರು.