ಮೈಸೂರು: ಮೈಸೂರಿನ ಬೆಳವಾಡಿಯಲ್ಲಿ, ರಕ್ಷಣಾ ಇಲಾಖೆಗೆ ಸಂಭಂಧಿಸಿದಂತೆ ತರಬೇತಿ ನೀಡುತ್ತಿರುವ ಸೈನಿಕ ಅಕಾಡೆಮಿಯಲ್ಲಿ ಮಕ್ಕಳು ಉಗ್ರರಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾಶ್ಮೀರದ ಪೆಹಾಲ್ಗಮ್ ನಲ್ಲಿ ನಿನ್ನೆ ನಡೆದ ಉಗ್ರರ ಅಟ್ಟಹಾಸದಲ್ಲಿ ಕರ್ನಾಟಕದವರು ಸೇರಿ 28 ಅಮಾಯಕ ನಾಗರಿಕರು ಜೊತೆಗೆ ಒಬ್ಬ ಸೇನಾಧಿಕಾರಿ ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿ, ಜೀವ ಕಳೆದುಕೊಂಡ ಎಲ್ಲಾ ನಾಗರಿಕರಿಗೆ ಸೈನಿಕ ಅಕಾಡೆಮಿಯ ಪುಟಾಣಿ ಮಕ್ಕಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಕಾಮಾಂಡೋ ಮತ್ತು ಸೈನಿಕ ಅಕಾಡೆಮಿಯ ಸಂಸ್ಥಾಪಕ ಶ್ರೀಧರ ಸಿ ಎಂ ಮಾತನಾಡಿ,ನಾನು ಕೂಡ ಆ ಒಂದು ಸುಂದರವಾದ ಪ್ರದೇಶದಲ್ಲಿ 3 ತಿಂಗಳು ಕರ್ತವ್ಯ ನಿರ್ವಹಿಸಿದ್ದೇನೆ, ಈ ಪ್ರದೇಶ ಜನ ಸಾಮಾನ್ಯರಿಗೆ ಹೊರ ರಾಜ್ಯದ ನಾಗರಿಕರಿಗೆ ಕಣ್ತುಂಬುವ ಪ್ರಶಾಂತವಾಗಿರುವ ಪ್ರದೇಶವಾಗಿದೆ, ಇಂತಹ ಸುಂದರವಾದ ಪ್ರದೇಶದ ಸವಿರುಚಿಯನ್ನು ಸವಿಯಲೇಬೇಕು, ಆದರೆ ಮ್ಯಾನ್ ಮೇಡ್ ಮೆಷಿನ್ ಟೆರರಿಸ್ಟ್ ಗಳಿಗೆ ಕೊನೆ ಯಾವಾಗ ಎಂದು ಪ್ರಶ್ನಿಸಿದರು.
ಈ ಉಗ್ರವಾದಿಗಳು ಮನುಷ್ಯ ರೂಪಿಸಿರುವ ಮಷೀನ್ ಆಗಿರುತ್ತವೆ, ಅವುಗಳಿಗೆ ಮನುಷ್ಯನ ಬೆಲೆ ಗೊತ್ತೇ ಇರಲ್ಲ, ಇಂತಹ ಮಷೀನ್ ಗಳನ್ನು ಗುಪ್ತ ಜಾಗದಲ್ಲಿ ತಯಾರಿಸುತ್ತಾರೆ, ಇಂತಃ ಮಷೀನ್ ಗಳಿಗೆ ಪ್ರಪಂಚ, ಮನುಷ್ಯನ ಜೀವ, ಬಾಂಧವ್ಯ ಏನು ಗೊತ್ತಿರುವುದಿಲ್ಲ, ಇರುವ ಮನುಷ್ಯನ ಸುಖವನ್ನು ಬಿಟ್ಟು ಕಾಣದ ಸ್ವರ್ಗವನ್ನು ಹುಡುಕುತ್ತಾರೆ ಎಂದು ಹೇಳಿದರು.
ಧರ್ಮ ಜಾತಿಯೆಂದು ದೇಶದೊಳಗೆ ಅನ್ಯಾಯ ಹೆಚ್ಚಾಗಿದೆ, ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಯಾವಾಗ ಬರುತ್ತದೊ ಎಂದು ಬೇಸರ ದಲ್ಲೇ ಶ್ರೀಧರ್ ತಿಳಿಸಿದರು
ಭಾರತೀಯ ಸೇನೇ ಒಂದಕ್ಕೆ ಪರಿಹಾರ ಹತ್ತು ತಲೆ ತಂದೇ ತರುತ್ತದೆ, ಪಾಕಿಸ್ತಾನ ಬೇಗನೆ ಕುಗ್ಗುತ್ತದೆ ಇದು ಸತ್ಯ ಎಂದು ನುಡಿದರು.