ಸೈನಿಕ ಅಕಾಡೆಮಿಯಲ್ಲಿ ಪುಲ್ವಾಮ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ

Spread the love

ಮೈಸೂರು: ಮೈಸೂರಿನ ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿಯಲ್ಲಿ ಪುಲ್ವಾಮ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಲಾಯಿತು.

ಈ ವೇಳೆ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರಾದ ಶ್ರೀಧರ ಸಿ ಎಂ ಮಾತನಾಡಿ ಪಾಪಿ ಪಾಕಿಸ್ತಾನಿ ಉಗ್ರರ ಕುತಂತ್ರದಿಂದ ನಮ್ಮ ವೀರ ಸೈನಿಕರನ್ನು ಕಳೆದುಕೊಂಡಿರುವುದು ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದರು.

ಇಂತಹ ಉಗ್ರರನ್ನು ಸದೆಬಡಿಯ ಬೇಕೆಂದರೆ ಪ್ರತಿಯೊಂದು ಕುಟುಂಬದಲ್ಲಿ ಒಬ್ಬ ಸೈನಿಕ ಇರಬೇಕು ಅದಕ್ಕೆ ಅಗ್ನಿವೀರ್ 4 ವರ್ಷ ಸ್ಕೀಮ್ ಅನುಕೂಲವಾಗಿದೆ ಎಂದು ತಿಳಿಸಿದರು.

ಮುಂದೊಂದು ದಿನ ಈ ಅಗ್ನಿಪತ್ ಸ್ಕೀಮ್ ನಿಂದ ಮನೆಯಲ್ಲೊಬ್ಬ ಸೈನಿಕ ಇರುತ್ತಾನೆ ಇದರಿಂದ ಗುಂಡಾಗಿರಿ, ದುಶ್ಚಟ, ಮೋಸ, ವಂಚನೆ, ವಿಂಗಡಣೆ, ಭ್ರಷ್ಟಾಚಾರ, ಸೋಂಬೇರಿತನ ಎಲ್ಲವು ಕಡಿಮೆ ಆಗುತ್ತದೆ ಜೊತೆಗೆ ನಿವೃತ್ತಿಯ ನಂತರವೂ ನಮ್ಮ ಸೇನೆಯ ಬೆನ್ನೆಲಾಬಾಗಿ ನಮ್ಮ ಅಗ್ನಿವೀರರು ಇರುತ್ತಾರೆ ನಮ್ಮ ದೇಶ ಬಲಿಷ್ಠವಾದ ದೇಶ ಆಗುತ್ತದೆ ಎಂದು ಹೇಳಿದರು.

ಇದೆ ಸಂಧರ್ಭದಲ್ಲಿ 4 ನೇ ತರಗತಿಯ ಅಭ್ಯರ್ಥಿ ಶಾಶ್ವಿತ್ ಅವರು ಹುತಾತ್ಮ ಪುಲ್ವಾಮ ಸೈನಿಕರ ಬಗ್ಗೆ ಮಾತನಾಡಿದರು.