ಸೈನಿಕ ಅಕಾಡೆಮಿಯಲ್ಲಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿಯಲ್ಲಿ ದೇಶ ರಕ್ಷಣೆಗಾಗಿ ಸೇರಲು ತರಬೇತಿ ಪಡೆದುಕೊಳ್ಳುತ್ತಿರುವ ಭವಿಷ್ಯದ ಸೈನಿಕರು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಕಮಾಂಡೋ ಮತ್ತು ಸೈನಿಕ ಅಕಾಡೆಮಿ ಸಂಸ್ಥಾಪಕರು ಶ್ರೀಧರ ಸಿ ಎಂ, ಅಧ್ಯಾಪಕರಾದ ವಿಜಯ ಕುಮಾರ್ ಮತ್ತು ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಶ್ರೀಧರ ಸಿ ಎಂ‌ ಅವರು ಎಸ್.ಎಂ ಕೃಷ್ಣ ಕುರಿತು ಮಾತನಾಡಿ ಅವರು ಮುಖ್ಯ ಮಂತ್ರಿಯಾಗಿ ಮಾಡಿರುವ‌ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿಕೊಟ್ಟರು.