ಗುಲ್ಬರ್ಗ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಒಂಬತ್ತು ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಶ್ಲಾಘನೀಯ ಎಂದು ಬಿಜೆಪಿ
ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ರಾಜ್ಯ ಸಂಚಾಲಕಿ ಡಾ ರೂಪ ಅಯ್ಯರ್ ಹೇಳಿದ್ದಾರೆ.
ನಮ್ಮ ಸೇನೆ ಭಾರತ ಮಾತೆಯ ನಿಜವಾದ ಸಿಂಧೂರ ಕಾಶ್ಮೀರವನ್ನು ಭಯೋತ್ಪಾದಕರ ದಾಳಿಯಿಂದ ರಕ್ಷಿಸಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಭಾರತೀಯರ ಸಿಂಧೂರವನ್ನು ರಕ್ಷಿಸಲು ತಮ್ಮ ಜೀವ ಮತ್ತು ತಮ್ಮ ಕುಟುಂಬವನ್ನು ಲೆಕ್ಕಿಸದೆ ಆಪರೇಷನ್ ಸಿಂಧೂರ ಧರ್ಮ ಯುದ್ಧದಲ್ಲಿ ಭಾಗಿಗಳಾಗಿರುವ ಎಲ್ಲಾ ವೀರ ಯೋಧರಿಗೂ ದೈವಿಕ ಚೈತನ್ಯ ಶಕ್ತಿ ಮತ್ತು ವೀರ ಜಯ ಸಿಗಲಿ ಎಂದು ಗುಲ್ಬರ್ಗದ ಗಾಣಿಗಪುರದಲ್ಲಿ ಗುರು ದತ್ತಾತ್ರೇಯ ದೇವರಲ್ಲಿ ರೂಪಾ ಅಯ್ಯರ್ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು,
ಪಹಲ್ಗಾಮ್ ದಾಳಿ ನಡೆದ ದಿನದಿಂದ ಒಂದಿಲ್ಲೊಂದು ಕಠಿಣ ನಿಲುವು ಕೈಗೊಂಡ ನರೇಂದ್ರ ಮೋದಿ ಮತ್ತು ಭಾರತೀಯ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ದೇಶಕ್ಕೆ ನಿಜವಾದ ನೇತೃತ್ವ, ವ್ಯವಸ್ಥಿತ ಸೈನ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಜೊತೆಗೆ ಕ್ಯಾತೆ ತೆಗೆಯುವ ಎಲ್ಲ ನೆರೆಯ ರಾಷ್ಟ್ರಗಳಿಗೆ ಈ ದಾಳಿ ಎಚ್ಚರಿಕೆಯ ಗಂಟೆಯಾಗಲಿದೆ. ನಾವು ದೇಶಕ್ಕೆ ಆಗುವ ಚಿಕ್ಕ ಅಪಮಾನವನ್ನು ಸಹಿಸುವುದಿಲ್ಲ ಕಾರ್ಯಾಚರಣೆ ಪಾಕಿಸ್ತಾನಕ್ಕೆ ಪಾಠವಾಗಲಿದೆ ಎಂದು ರೂಪಾ ಹೇಳಿದರು.