ಮೈಸೂರು: ರೋಟರಿ ಮೈಸೂರು ಅಂಬಾರಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.2 ರಂದು ಸಂಜೆ ಬೃಂದಾವನ ಬಡಾವಣೆಯ,
ರೋಟರಿ ಬೃಂದಾವನ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ರೋ.ಪಿಎಚ್ಎಫ್. ಹರೀಶ್ ಮತ್ತು ಗೌರವ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ವಲಯ8 ರ ಪಿ ಎಚ್ ರೋ, ಜಗದೀಶ್ ಎಸ್ .ಹೆಚ್. ವಲಯ 8 ರ ಸೇನಾನಿಗಳಾದ ರೋ.ಶಿವಕುಮಾರ್ ರೋ.ಸಂತೋಷ ಗೌಡ, ರೋಟರಿ ಮೈಸೂರ್ ಅಂಬಾರಿ ಅಧ್ಯಕ್ಷರಾದ ಹರೀಶ್, ಕಾರ್ಯದರ್ಶಿ ಮಂಜುನಾಥ್, ಕನ್ನಡ ರಾಜ್ಯೋತ್ಸವ ಚೇರ್ಮನ್ ರೋ ಜಗದೀಶ್. ಎಲ್.,ಮಾಜಿ ಅಧ್ಯಕ್ಷರುಗಳಾದ ರೋ ಜಗದೀಶ್.ಆರ್, ರೋ.ಭರತ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೋ.ಲೋಕೇಶ್, ರೋ.ಪಂಡರಿನಾಥ್, ರೋ ಮನು, ರೋ ನಿತ್ಯಾನಂದ ಹಾಗೂ ಸಾಂಸ್ಕೃತಿಕ ಕಲಾವಿದರು ಭಾಗವಹಿಸಿ ಕನ್ನಡ ಹಾಡುಗಳನ್ನು ಹಾಡಿದರು.ಈ ವೇಳೆ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

