ವಿಶ್ವ ಪಾರಂಪರಿಕದ ದಿನ: ಪ್ರವಾಸಿಗರಿಗೆ ಮೈಸೂರು ಪಾಕ್, ಗುಲಾಬಿ ವಿತರಿಸಿದ ಪ್ರಜ್ಞಾವಂತ ನಾಗರಿಕ ವೇದಿಕೆ

Spread the love

ಮೈಸೂರು: ಮೈಸೂರು ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅರಮನೆಯ ಮುಂಭಾಗ ವಿಶ್ವ ಪಾರಂಪರಿಕ ದಿನ ಅಂಗವಾಗಿ ಪ್ರವಾಸಿಗರಿಗೆ ಮೈಸೂರು ಪಾಕ್ ಹಾಗೂ ಗುಲಾಬಿ ವಿತರಿಸಿ ಮೈಸೂರಿನ ಪಾರಂಪರಿಕತೆ ಬಗೆ ತಿಳಿಸಿಕೊಡಲಾಯಿತು.

ಈ ವೇಳೆ ಪ್ರಜ್ಞಾವಂತ ನಾಗರಿಕ ವೇದಿಕೆಯ ಮಹಿಳಾ ಅಧ್ಯಕ್ಷರಾದ ನಾಗಮಣಿ ಮಾತನಾಡಿ,ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸ, ವೈವಿಧ್ಯತೆ ಅವುಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪರಂಪರೆ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ನಮ್ಮ ಪುರಾತನ ತಾಣಗಳು ಮತ್ತು ಸ್ಮಾರಕಗಳ ಬಗ್ಗೆ ಯುವ ಪೀಳಿಗೆಗೆ ಮಹತ್ವದ ಸಂದೇಶ ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ರಕ್ತದಾನದ ಕೊರತೆಯನ್ನು ನೀಗಿಸಲು ಪಾರಂಪರಿಕ ಕಟ್ಟಡದ ಮುಂಭಾಗಗಳಲ್ಲಿ ರಕ್ತದಾನದ ಜಾಗೃತಿಯ ಬಗ್ಗೆ ನಾಮಫಲಕಗಳನ್ನು ಅಳವಡಿಸಿ ರಕ್ತದಾನದ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು

ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ರವಿಚಂದ್ರ,ದರ್ಶನ್ ಮೂರ್ತಿ, ರವಿ,ಯತೀಶ್ ಬಾಬು,ಉಮೇಶ್, ಸದಾಶಿವ್ ಮತ್ತಿತರರು ಹಾಜರಿದ್ದರು.