ಟಿ.ನರಸೀಪುರ: ನೀರಿನಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿಯಾದ ದುರ್ಘಟನೆ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ತಿ. ನರಸೀಪುರ ಪಟ್ಟಣದ ಚೌಡಯ್ಯ (70), ಭರತ್ (13) ಧನುಷ್ (10) ಮೃತ ದುರ್ದೈವಿಗಳು.
ಕಾವೇರಿ ನದಿ ಬಳಿ ಆಟ ಆಡಲು ತೆರಳಿದ್ದ ವೇಳೆ ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.ಇದನ್ನು ಕಂಡ ತಾತ ಚೌಡಯ್ಯ ಮೊಮ್ಮಕ್ಕಳನ್ನು ರಕ್ಷಣೆಗೆ ಮುಂದಾಗಿದ್ದಾರೆ ಸಾಧ್ಯವಾಗದೆ ಮಕ್ಕಳೊಂದಿಗೆ ಅವರೂ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶವವನ್ನು ಹೊರತೆಗೆದು ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ರವಾನಿಸಲಾಯಿತು.
ಈ ಸಂಬಂಧ ಮಕ್ಕಳ ತಂದೆ ನೀಡಿದ ದೂರಿನ ಮೇರೆಗೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬಸ್ಥರ ಆಕ್ರಂದನ ಹೇಳಲಸದಳವಾಗಿದೆ,ವಿಷಯ ತಿಳಿದು ಪಟ್ಟಣೆ ಜನತೆ ಧಾವಿಸಿ ಮಮ್ಮಲ ಮರುಗುತ್ತಿದ್ದು ಕಂಡುಬಂದಿತು.