ಮೈಸೂರು: ರಿಪ್ಪನ್ ಸ್ವಾಮಿ ಚಿತ್ರದ
ನಿರ್ದೇಶಕ ಕಿಶೋರ್ ಮೂರ್ತಿ ಹಾಗೂ ನಟ ವಿಜಯ ರಾಘವೇಂದ್ರ ಅವರಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಯುವಭಾರತ್ ಸಂಘಟನೆಯ ಜೋಗಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆಝಾನ್ ಪ್ರೈಮ್ ನಲ್ಲಿ ಶುಕ್ರವಾರ ಬಿಡುಗಡೆ ಯಾಗಿರುವ ರಿಪ್ಪನ್ ಸ್ವಾಮಿ ಚಲನ ಚಿತ್ರದಲ್ಲಿ ಹಿಂದು ಧರ್ಮ ಹಾಗೂ ಸಂಸ್ಕೃತಿಗೆ ಪ್ರತೀಕ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಗೆ ಕಾಲಿನಿಂದ ಒದ್ದು ಅವರನ್ನು ತುಳಿದ ತುಣುಕುಗಳನ್ನು ನೋಡಿ ದಿಗ್ರಮೆ ಯಾಯಿತು ಎಂದು ಜೋಗಿ ಮಂಜು ಹೇಳಿದ್ದಾರೆ.

ಇದು ಅಯ್ಯಪ್ಪ ಸ್ವಾಮಿಗೆ ಮಾಡಿದ ಅವಮಾನ. ಅವಮಾನ ಮಾಡುವ ಮೂಲಕ ಹಣ ಮಾಡುವ ತೆವಲು ನಿರ್ದೇಶಕರುಗಳಿಗೆ ಇರಬಾರದು ಎಂದು ಅವರು ಅಸಮಾಧಾನ ಪಟ್ಟಿದ್ದಾರೆ.
ಕೂಡಲೆ ಇಂತಹ ತುಣುಕುಗಳನ್ನು ತೆಗೆದು ಪ್ರಚಾರ ಮಾಡಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗಿ ಮಂಜು ಎಚ್ಚರಿಸಿದ್ದಾರೆ.