ರಿಚರ್ಡ್ ಸ್ನೇಹ ಬಳಗದಿಂದಶ್ರವಣದೋಷ ಮಕ್ಕಳಿಗೆ ಸಂತೋಷಕೂಟ‌ ಏರ್ಪಡಿಸಿ ಹೊಸ‌ ವರ್ಷಾಚರಣೆ

Spread the love

ಮೈಸೂರು: ಎಲ್ಲಾ ಸಂಘ,ಸಂಘಟನೆಗಳು ಹೊಸ‌ ವರ್ಷಾಚರಣೆ ಮಾಡಿವೆ,ಆದರೆ‌ ಎಡ್ವಿನ್ ರಿಚರ್ಡ್ ಸ್ನೇಹ ಬಳಗದವರು ಶ್ರವಣದೋಷ ಮಕ್ಕಳಿಗೆ ಸಂತೋಷಕೂಟ ಏರ್ಪಡಿಸಿ ಮಾದರಿಯಾಗಿದ್ದಾರೆ.

ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿರುವ ಶ್ರೀಸಾಯಿರಂಗ ವಿದ್ಯಾಸಂಸ್ಥೆಯಲ್ಲಿ ಶ್ರವಣದೋಷ ಮಕ್ಕಳ ವಸತಿಯುತ ಶಾಲೆಯಲ್ಲಿ ಹೊಸವರ್ಷದ ಅಂಗವಾಗಿ ಎಡ್ವಿನ್ ರಿಚರ್ಡ್ ಸ್ನೇಹ ಬಳಗ ಸಂತೋಷಕೂಟ ಭೋಜನದ ವ್ಯವಸ್ಥೆ ಮಾಡಿ ಮಕ್ಕಳಲ್ಲಿ ಸಂತಸ ತಂದಿದೆ.

ಈ ವೇಳೆ ಸಮಾಜಸೇವಕ ಎಡ್ವಿನ್ ರಿಚರ್ಡ್ ಅವರು ಮಾತನಾಡಿ ಸಮಾಜದಲ್ಲಿ ಜಾತಿ ಧರ್ಮಕ್ಕಿಂತ ಮಾನವೀಯತೆ ಮುಖ್ಯ, ನಾವು ಎಷ್ಟೇ ಹಣ ಅಂತಸ್ತು ಸಂಪಾದಿಸಿದರೂ ಅದರಲ್ಲಿ ಸ್ವಲ್ಪವಾದರೂ ವಂಚಿತರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು, ಸಮಾಜಮುಖಿ ಕೆಲಸ ಮಾಡುವ ಸಂಘ ಸಂಸ್ಥೆಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ್ ಮಲ್ಲಿಕ್, ಶ್ರೀನಿವಾಸ್.ಬಿ, ಮಂಜು ಗೌಡ, ಪದ್ಮನಾಭನ್ ಗುಂಡಾ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಸಾಗರ್ ಗೌಡ, ಒಂಟಿಕೊಪ್ಪಲ್ ಗುರುರಾಜ್, ಪೈಲ್ವಾನ್ ಮಹೇಶ್, ರಘು, ರಾಜೇಶ್ ಸಿ ಗೌಡ, ಆಲನಹಳ್ಳಿ ಚೇತನ್ ಗೌಡ, ಸೋಮೆಗೌಡ, ಧನರಾಜ್, ಸುಂದರ್ ಮತ್ತಿತರರು ಹಾಜರಿದ್ದರು‌.