ನಂಜನಗೂಡು: ನಮ್ಮ ಸಮೂಹ ಶ್ರಮದಿಂದಲೇ ಕಾಲೇಜು ಶ್ರೇಷ್ಟ ಫಲಿತಾಂಶ ಗಳಿಸಬಹುದು ಎಂದು ಫಲಿತಾಂಶ ಸುಧಾರಣೆಯ ಜಿಲ್ಲಾ ಮಟ್ಟದ ಸಂಚಾಲಕರಾದ ಪ್ರಾಂಶುಪಾಲ ಜಾರ್ಜ್ ಫ್ಯಾನ್ಸಿಸ್ ತಿಳಿಸಿದರು.
ನಂಜನಗೂಡು ತಾಲೂಕು ಫಲಿತಾಂಶ ಸುಧಾರಣೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಹೆಚ್ಚಿಸಲು ಹಾಗೂ ಮುಂದಿನ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಸಾಧಿಸುವ ಉದ್ದೇಶದಿಂದ ಉಪನ್ಯಾಸಕರಿಗೆ ಫಲಿತಾಂಶ ಸುಧಾರಣೆ ಕುರಿತು ಮಾಹಿತಿ ಸಭೆಯನ್ನು ನಂಜನಗೂಡು ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಫಲಿತಾಂಶ ಸುಧಾರಣಾ ಕಾರ್ಯಗಾರವನ್ನು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು,ಈ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ,ಪ್ರತಿ ಉಪನ್ಯಾಸಕರು ತಮ್ಮ ವಿಷಯದ ವಿದ್ಯಾರ್ಥಿಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಂಡು, ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಮಾರ್ಗದರ್ಶನ ನೀಡುವುದು ಅತ್ಯವಶ್ಯಕ ಎಂದು ಸಲಹೆ ನೀಡಿದರು.
ನಿರಂತರ ಪರೀಕ್ಷೆಗಳು ಮತ್ತು ಫಲಿತಾಂಶ ವಿಶ್ಲೇಷಣೆಯಿಂದ ವಿದ್ಯಾರ್ಥಿಗಳ ಮಟ್ಟವನ್ನು ಸುಧಾರಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ವಿಷಯವಾರು ಫಲಿತಾಂಶ ವಿಶ್ಲೇಷಣೆ, ಅಭ್ಯಾಸ ಪಠ್ಯಗಳು, ಮತ್ತು ಬೋಧನಾ ವಿಧಾನಗಳ ಕುರಿತು ಚರ್ಚೆ ನಡೆಯಿತು.
ಉಪನ್ಯಾಸಕರಾದ ಗಿರೀಶ ಹಾಗೂ ಶಶಿಧರ್ ಅವರು ಫಲಿತಾಂಶ ಸುಧಾರಣೆಗೆ ನೂತನ ಆಲೋಚನೆಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಫಲಿತಾಂಶ ಸುಧಾರಣೆ ಸದಸ್ಯರಾದ ಸಂತೋಷ್, ವೆಂಕಟೇಶ್, ಜನಾರ್ಧನ್, ರಮೇಶ್, ರಾಜಲಕ್ಷ್ಮಿ, ವಾಸು , ಪ್ರಾಂಶುಪಾಲರಾದ ಚಂದ್ರಶೇಖರ ಬಾಬು, ಬಿ.ಎಸ್ ನಾಗರಾಜು, ಸರಳ,ಚೆನ್ನಬಸಪ್ಪ ,ಕೆಂಡಗಣ್ಣಸ್ವಾಮಿ,ಪ್ರವೀಣ್ ,ಹೇಮಂತ್ ಕುಮಾರ್ ಮತ್ತು ತಾಲೂಕಿನ ಎಲ್ಲಾ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಮತ್ತು ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಡಾ. ಈ ಮಾಲತಿ ಮತ್ತಿತರರು ಹಾಜರಿದ್ದರು.