ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಘವೇಂದ್ರ ಸಲಹೆ

Spread the love

ಮೈಸೂರು: ಮಯೂರ ಕನ್ನಡ ಯುವಕರ ಬಳಗ ವತಿಯಿಂದ ಹಳೆ ಸಂತೆಪೇಟೆಯಲ್ಲಿ
ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಪತ್ರಿಕೆ ನೀಡಿ ಎಲ್ಲ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ ಮಾತನಾಡಿ,ಪತ್ರಕರ್ತರಿಗೆ ಬಿಡುವು ಎನ್ನುವುದಿಲ್ಲ. ಹಗಲು, ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಹ ಅವರಲ್ಲಿ ಸಮಯ ಇರುವುದಿಲ್ಲ ಎಂದು ಹೇಳಿದರು.

ಸದಾ ಒತ್ತಡದ ನಡುವೆಯೇ ಕೆಲಸ ಮಾಡಬೇಕಿದೆ,ಪತ್ರಕರ್ತರ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ನಡುವೆ ಸ್ಪರ್ಧೆ ಏರ್ಪಡುತ್ತಿದೆ. ಪತ್ರಕರ್ತರು ಆರೋಗ್ಯಪೂರ್ಣ ಸ್ಪರ್ಧೆಗೆ ತೆರೆದುಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಯಾರ ಪ್ರಭಾವಕ್ಕೂ ಮಣಿಯದೆ ನಿರ್ಭಯದಿಂದ ಜವಾಬ್ದಾರಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಪೈಪೋಟಿ ಹೆಚ್ಚುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ,ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಯನ್ನು ಓದುವ ದಿನಚರಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ರಾಘವೇಂದ್ರ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಎಸ್ ಎನ್ ರಾಜೇಶ್, ಮಯೂರ ಕನ್ನಡ ಯುವಕರ ಬಳಗದ ಕಾರ್ಯದರ್ಶಿ ಮಂಜುನಾಥ್, ಹಿರಿಯ ಪತ್ರಕ ವಿತರಕರಾದ ರಮಾಬಾಯಿ, ಎಸ್ಎನ್ ರಾಜೇಶ್, ರವಿಚಂದ್ರ, ಯೋಗೇಶ್, ರಾಕೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.