ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ವಿಶೇಷ ಹೋಮ :ಶಾಸಕ ಹರೀಶ್ ಗೌಡ ಭಾಗಿ

Spread the love

ಮೈಸೂರು,ಜೂ.2: ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು
ನಗರದ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಹಮ್ಮಿಕೊಂಡರು.

ಅಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ
ವರ್ಸಸ್ ಪಂಜಾಬ್ ಫೈನಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜ್ ಬೆಂಗಳೂರು ಜಯಗಳಿಸಲಿ ಎಂದು ಅಭಿಮಾನಿಗಳು ಆರ್ ಸಿ ಬಿ ತಂಡದ ಆಟಗಾರರಿಗೆ ದೈವಬಲ ತುಂಬಲು
ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕುಮಾರ್ ಅವರ ನೇತೃತ್ವದಲ್ಲಿ ವಿಜಯ ದುರ್ಗಾ ಹೋಮ ನೆರವೇರಿಸಿದರು.

ಆರ್ ಸಿ ಬಿ ಜರ್ಸಿ ಧರಸಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಕೂಡಾ ಆರ್ ಸಿ ಬಿ ಜರ್ಸಿ ಧರಸಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಹರೀಶ್ ಗೌಡರು, ಈ ಬಾರಿ ಆರ್ ಸಿ ಬಿ ಗೆಲ್ಲುವ ನಿರೀಕ್ಷೆಯಲ್ಲಿದ್ದೇವೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಪ್ರತಿಯೊಬ್ಬ ಆಟಗಾರರು ಅತ್ಯುತ್ತಮ ಪ್ರದರ್ಶನ ಮಾಡಿದ್ದಾರೆ,
ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಮೇಲೆ ಅತಿ ನಿರೀಕ್ಷೆಯಲ್ಲಿದ್ದೇವೆ, ಆರ್ ಸಿ ಬಿ ತಂಡ ಗೆಲುವು ಸಾಧಿಸಿ ಕಪ್ ತರಲಿ ಎಂದು ಶುಭ ಹಾರೈಸಿದರು.

ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಮಪ್ಪ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ , ಗುರುರಾಜ್ ಶೆಟ್ಟಿ, ನವೀನ, ರವಿಚಂದ್ರ, ಸಂದೀಪ್, ಎಸ್ ಎನ್ ರಾಜೇಶ್, ನಿತಿನ್, ಹರೀಶ್ ಗೌಡ, ರವಿಕುಮಾರ್, ಹೇಮಂತ,ಜಗದೀಶ್, ಹರ್ಷ, ಲೋಕೇಶ್, ಶ್ರೀನಿವಾಸ ಶೆಟ್ಟಿ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.