ಮೈಸೂರು: ಮೈಸೂರಿನ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ 2025-30ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ದೇವರಾಜ ಮೊಹಲ್ಲಾ ನಿವಾಸಿ ರವಿಚಂದ್ರ ಅವರು ಜಯ ಗಳಿಸಿದ್ದಾರೆ.
ರವಿಚಂದ್ರ ಅವರು ಜಯ ಗಳಿಸಿದ ಹಿನ್ನೆಲೆಯಲ್ಲಿ ನಗರದ 23ನೇ ವಾರ್ಡಿನ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಮುಖಂಡರಾದ ಆರ್.ಪರಮೇಶ್ ಗೌಡ,ಪ್ರಮೋದ್,ಸಂದೇಶ್, ಅಭಿಷೇಕ್, ಶ್ರೀನಿವಾಸ್, ಕಿರಣ್, ಶ್ರವಣ್ ಮಾಲಿ, ವಿನೋದ್ ಅರಸ್ ಮತ್ತಿತರರು ರವಿಚಂದ್ರ ಅವರನ್ನು ಅಭಿನಂದಿಸಿದರು.
