ಹುಣಸೂರು: ಹುಣಸೂರಿನ ರತ್ನಪುರಿ ಭತ್ತ,ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಆರೋಪಿಸಿದೆ.
ರತ್ನಪುರಿ ಕಾಲೊನಿಯಲ್ಲಿರುವ ಈ ಭತ್ತ,ರಾಗಿ ಖರೀದಿ ಕೇಂದ್ರದದಲ್ಲಿ ರಾಗಿ ಖರೀದಿಯಲ್ಲಿ ಗೋಲ್ ಮಾಲ್ ಮಾಡಲಾಗುತ್ತಿದೆ ಎಂದು ಕೆಪಿಪಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಈ ಕೇಂದ್ರದಲ್ಲಿ ರೈತರಿಂದ ಕಡಿಮೆ ಬೆಲೆಗೆ ರಾಗಿ ಖರೀದಿ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ರೈತರಿಂದ 2800 ರೂ ಕೊಟ್ಟು ರಾಗಿ ಖರೀದಿಸಿ ಅದೇ ರಾಗಿಯನ್ನು 3200 ರೂ ಗೆ ಹೊರಗಿನವರಿಗೆ ಮಾರಾಟ ಮಾಡಿ ಹಣ ಹೊಡೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಏನಾದರೂ ಕೇಳಿದರೆ ನಮಗೇ ಆವಾಜ್ ಹಾಕುತ್ತಾರೆ,ಈ ಕೇಂದ್ರದಲ್ಲಿ ಭತ್ತ,ರಾಗಿ ಎಲ್ಲ ದರಲ್ಲೂ ಮೋಸ ಮಾಡಲಾಗುತ್ತದೆ ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ.ಕಷ್ಟಪಟ್ಟು ಬೆಳೆಯುವ ರೈತರಿಗೆ ಯಾವುದೇ ಲಾಭ ಆಗುತ್ತಿಲ್ಲ ಎಂದು ಚೆಲುವರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ರತ್ನಪುರಿ ಕಾಲೋನಿಯಲ್ಲಿರುವ ಭತ್ತ,ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಅವರು ಆಗ್ರಹಿಸಿದ್ದಾರೆ.