ವಿವಿಧ ಸಂಘಟನೆಗಳಿಂದ ರತನ್ ಟಾಟಾ ಅವರಿಗೆ ನಮನ

Spread the love

ಮೈಸೂರು: ಮೈಸೂರಿನಲ್ಲಿ ವಿವಿಧ‌ ಸಂಘಟನೆಗಳು ರತನ್ ಟಾಟಾ ಅವರಿಗೆ
ಭಾವಪೂರ್ಣ ನಮನ ಸಲ್ಲಿಸಿದವು.

ನಗರದ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ, ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ರತನ್ ಟಾಟಾ ಅವರ ಭಾವಚಿತ್ರ ಹಿಡಿದು ಮೌನಾಚರಣೆ ಮಾಡಿ ಭಾವಪೂರ್ಣ ಸಂತಾಪ ಸೂಚಿಸಿ ನಮನ ಸಲ್ಲಿಸಲಾಯಿತು,

ಈ ವೇಳೆ ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ ರಾಜ ಪ್ರಸಾದ್ ಮಾತನಾಡಿ ಟಾಟಾ ಸನ್ಸ್ ಮೂಲಕ ಹಲವಾರು ಉದ್ಯಮಗಳನ್ನ ಸ್ಥಾಪಿಸಿ ಲಕ್ಷಾಂತರ ಮಂದಿ ಉದ್ಯೋಗದಾತರಾಗಿ ಮಾಡಿ ಭಾರತವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಬ್ರಾಂಡ್ ಜನಪ್ರಿಯಗೊಳಿಸಿದ್ದರು ಎಂದು ಸ್ಮರಿಸಿದರು.

ಅವಕಾಶಗಳಿಗಾಗಿ ಕಾಯಬಾರದು ಅವಕಾಶವನ್ನ ಸೃಷ್ಟಿಸಿಕೊಳ್ಳಬೇಕು ಎನ್ನುವ ಮೂಲಕ ಯುವ ಉದ್ಯಮಿಗಳಿಗೆ ಟಾಟಾ‌ ಅವರು ಸ್ಪೂರ್ತಿಯಾಗಿದ್ದಾರೆ, ಸಂಪಾದನೆ ಶ್ರೀಮಂತಿಕೆಯ ಜೊತೆ ಹೃದಯ ಶ್ರೀಮಂತಿಕೆ ತೋರಿಸಿಕೊಟ್ಟವರು ರತನ್ ಟಾಟಾ ಎಂದು ಹೇಳಿದರು.

ಬಿ ವಿ ಮಂಜುನಾಥ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಮೈಸೂರ್ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಲೋಹಿತ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ನಿರೂಪಕ ಅಜಯ್ ಶಾಸ್ತ್ರಿ, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್, ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ದೂರ ರಾಜಣ್ಣ, ಕಾಂಗ್ರೆಸ್ ಯುವ ಮುಖಂಡ ಸಂತೋಷ್ ಕಿರಾಳು, ಮಧು ಎನ್ ಪೂಜಾರ್, ಧರ್ಮೇಂದ್ರ, ಮಹಾನ್, ಶ್ರೇಯಸ, ಮತ್ತಿತರರು ಪಾಲ್ಗೊಂಡಿದ್ದರು.