ಮೈಸೂರು: ಮೈಸೂರಿನ ಹೂಟಗಳ್ಳಿ ಕೆ ಎಚ್ ಬಿ ಬಡಾವಣೆಯಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.
ರಾಷ್ಟ್ರಕವಿ ಕುವೆಂಪು ವೃತ್ತದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಲಾಯಿತು.
ನಂತರ ಕುವೆಂಪು ಅವರನ್ನು ಸ್ಮರಿಸಿ ಅವರಂತೆ ಸಾಧನೆ ಮಾಡಬೇಕೆಂದು ಯುವಜನತೆಗೆ ಕರೆ ನೀಡಲಾಯಿತು.
ಈ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ,ಕುವೆಂಪು ಅವರ ಗುಣಗಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ದಾಸೇಗೌಡ, ನಾಗೇಶ್, ಸುರೇಶ್, ಸಿ ಬಿ ದೇವರಾಜ್,ಮೋಹನ್, ಗಿರೀಶ್, ಶಂಕರ್ ಲಿಂಗಯ್ಯ, ಪ್ರಕಾಶ್, ಚಂದ್ರು, ರಕ್ತದಾನಿ ಮಂಜು ಹಾಗೂ ಸಂಘದ ಸದಸ್ಯರು ಹಾಜರಿದ್ದರು.