ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ಗೆ ಡಿಆರ್‌ಐ ಕೋಟ್ಯಾಂತರ ರೂಗಳ ದಂಡ ವಿದೇಶಿಸುವ ಮೂಲಕ ಶಾಕ್ ನೀಡಿದೆ.
ರನ್ಯಾ ರಾವ್ ಗೆ 102 ಕೋಟಿ ರೂ. ದಂಡ ವಿಧಿಸಲಾಗಿದೆ.
127 ಕೆಜಿ ಚಿನ್ನ ಅಕ್ರಮ ಸಾಗಾಟ ಸಾಬೀತಾದ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.
ಡಿಆರ್‌ಐ ತನಿಖೆಯಲ್ಲಿ ಅಕ್ರಮ ಚಿನ್ನ ಸಾಗಾಟ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ.
ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ.
ಈಗಾಗಲೇ ಇ.ಡಿ 37 ಕೋಟಿ ರೂ. ಆಸ್ತಿ ಜಪ್ತಿ ಮಾಡಿದೆ. ಆಸ್ತಿ ಕಳೆದುಕೊಂಡಿರುವ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಡಿಆರ್‌ಐ ತನಿಖೆಯಲ್ಲಿ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಸಾಬೀತಾಗಿದ್ದು, 127 ಕೆಜಿ ಚಿನ್ನವನ್ನು 1 ವರ್ಷದಲ್ಲಿ ನಟಿ ರನ್ಯಾ ರಾವ್ ಬೆಂಗಳೂರಿಗೆ ತಂದಿದ್ದಾರೆ.