ಮಕ್ಕಳಿಗೆ ಶಿಕ್ಷಣದಷ್ಟೇ ರಂಗಭೂಮಿಯೂ ಮುಖ್ಯ: ನಟ ಪ್ರಕಾಶ್ ರಾಜ್

Spread the love

ಮೈಸೂರು: ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ರಂಗಭೂಮಿಯು ಸಹ ಮುಖ್ಯ,ಮಕ್ಕಳ ಬಹುರೂಪಿ ಎಂಬುದು ಒಂದು ಪ್ರಮುಖ ಆಯಾಮವಾಗಿದೆ ಎಂದು
ಚಿತ್ರ ನಟ ಪ್ರಕಾಶ್ ರಾಜ್ ಅವರು ಹೇಳಿದರು.

ಬಹುರೂಪಿ ನಾಟಕೋತ್ಸವವನ್ನು
ಮಕ್ಕಳ ರೂಪದಲ್ಲಿ ಆರಂಭ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು.

ಮೈಸೂರು ರಂಗಾಯಣದ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳು ಎಂಬುದು ಒಂದು ಭಾಗ. ನಾವೆಲ್ಲ ಮಕ್ಕಳನ್ನು ಭವಿಷ್ಯಕ್ಕಾಗಿ ರೂಪಿಸಬಾರದು ಇವತ್ತಿಗೂ ಸಹ ಮಕ್ಕಳಿಗೆ ಅವರದೇ ಆದ ಪ್ರಪಂಚ ಎಂಬುದಿದೆ,ಅದವೇ ಹಸಿರಿನ ಪ್ರಪಂಚ, ಕುತೂಹಲದ ಪ್ರಪಂಚ ಎಂದು ಹೇಳಿದರು.

ಜೊತೆಗೆ ತನ್ನನ್ನು ತಾನು ರೂಪಿಸಿಕೊಳ್ಳುವಂತಹ ಪ್ರಪಂಚ ಇದೆ. ಮಕ್ಕಳನ್ನು ನಾವು ಬೆಳೆಸಬೇಕಾಗಿಲ್ಲ ಬೆಳೆಯುತ್ತಿರುವ ಮಕ್ಕಳನ್ನು ನಾವು ಸೂಕ್ಷ್ಮ ಗೊಳಿಸಬೇಕು ಎಂದು ತಿಳಿಸಿದರು.

ಮನೆಯಲ್ಲೇ ಒಂದು ಅದ್ಭುತವಾದ ಕಲಿಕೆ ಇದ್ದರೂ ಸಹ ಶಾಲೆಯಿಂದ ಬಂದಂತ ಮಕ್ಕಳನ್ನ ನಂತರ ಟ್ಯೂಷನ್ ಹಾಕಿ ಅವರಿಗೆ ಒತ್ತಡದ ರೀತಿಯಲ್ಲಿ ನಾವು ತೊಡಗಿಸುತ್ತಿದ್ದೇವೆ. ಮಕ್ಕಳ ಬಗ್ಗೆ ಪೋಷಕರು ಸಹ ಯೋಚನೆ ಮಾಡಬೇಕು ಅವರ ಬಗ್ಗೆ ಗಮನ ಕೊಡಬೇಕು ಎಂದು ಪ್ರಕಾಶ್ ರಾಜ್ ಸಲಹೆ ನೀಡಿದರು.

ಸಮಾರಂಭದಲ್ಲಿ ಮೈಸೂರು ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜವರೇಗೌಡ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ಡಿ ಸುದರ್ಶನ್ ಉಪಸ್ಥಿತರಿದ್ದರು.