ಪೌರಕಾರ್ಮಿಕರಿಗೆ ಬಾಗಿನ ನೀಡಿ ಶುಭ ಕೋರಿದ ಮಾ ವಿ ರಾಮಪ್ರಸಾದ್

Spread the love

ಮೈಸೂರು: ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರು
ಪೌರ ಕಾರ್ಮಿಕರಿಗೆ ಬಾಗಿನ ನೀಡಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಅವರು ಪೌರ ಕಾರ್ಮಿಕ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯ ಜತೆಗೆ ನಗರದ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಇಂತಹ ಸಹೋದರಿಯರಿಗೆ ಬಾಗಿನ ನೀಡುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.

ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನ-ಮೊಗದಲ್ಲಿ ಸಂತಸ ಮೂಡಿರುವುದು ಸಾರ್ಥಕ
ತರಿಸಿದೆ ಎಂದು ಹೇಳಿದರು.

ನಮಗಾಗಿಯೂ ಮಿಡಿಯುವ ಮನಸ್ಸುಗಳು ಸಮಾಜದಲ್ಲಿ ನಮ್ಮೊಡನೆ ಜತೆಗಿವೆ ಎಂಬ ಆಶಯ ಅವರಲ್ಲಿ ಭರವಸೆಯಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರ ಪಾಲಿಕೆ ವಲಯ ಆಯುಕ್ತ ಮಂಜುನಾಥ್ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್, ಸ್ಥಳೀಯ ಮುಖಂಡರಾದ ಉಮಾಶಂಕರ್, ಮಂಜುನಾಥ್, ಮುರುಳಿ, ಗುರುಮಲ್ಲಪ್ಪ, ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಗೌಡ, ಮಧು, ತೀರ್ಥ, ರವಿ ಮತ್ತಿತರರು ಹಾಜರಿದ್ದರು.