ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ತೇಜಸ್ವಿ ನಾಗಲಿಂಗ ಸ್ವಾಮಿ ಏಕಾಂಗಿ ಸತ್ಯಾಗ್ರಹ

Spread the love

ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಕಾಮಗಾರಿ ಮಾಡಿದ್ದರೂ ಕೆಲವೆಡೆ ಡಾಂಬರು ಹಾಕದೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.

ಅವರು‌ ಶುಕ್ರವಾರ ರಾಮಾನುಜ ರಸ್ತೆ ಬಳಿ ಏಕಾಂಗಿ‌ ಧರಣಿ ಸತ್ಯಾಗ್ರಹ ಮಾಡಿ ಗಮನ ಸೆಳೆದರು.

ದುರಂತದ ಸಂಗತಿ ಎಂದರೇ ೧ ರಿಂದ ೮ ನೇ ತಿರುವಿನ ವರೆಗೆ ರಸ್ತೆ ದುರಸ್ತಿ ಮಾಡಿ ಡಾಂಬರೀಕರಣ ಮಾಡಲಾಗಿದೆ,ಆದರೆ
ಇನ್ನುಳಿದ ೯ ರಿಂದ ೧೯ ನೇ ತಿರುವಿನ ವರೆಗೂ ವರ್ಷಗಳೇ ಕಳೆದರೂ ಡಾಂಬರೀಕರಣ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಮಾರ್ಗದಲ್ಲಿ ಶಾಲೆ, ಮಠ, ಆಸ್ಪತ್ರೆ ಗಳಿದ್ದು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿದೆ,ದ್ವೇಷ ರಾಜಕೀಯ ಮಾಡಿ ಮಲತಾಯಿ ಧೋರಣೆಯನ್ನು ತೋರುತ್ತಿರುವ ಶಾಸಕರು ಹಾಗೂ ಪಾಲಿಕೆ ಸದಸ್ಯರ ನಡೆಯನ್ನು ಖಂಡಿಸುತ್ತೇನೆ ಎಂದು ತೇಜಸ್ವಿ ತಿಳಿಸಿದರು.

ಶುಕ್ರವಾರ ನ.1 ರಂದು ತೇಜಸ್ವಿ ನಾಗಲಿಂಗಸ್ವಾಮಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೬ ಗಂಟೆಯ ವರೆಗೂ ಏಕಾಂಗಿಯಾಗಿ ಸತ್ಯಾಗ್ರಹ ಮಾಡಿದರು.

ಇನ್ನಾದರೂ ರಾಮಾನುಜ ರಸ್ತೆಯ ೯ ರಿಂದ ೧೯ ನೇ ತಿರುವಿನ ವರೆಗೂ ಡಾಂಬರು ಹಾಕಿ ರಸ್ತೆ ಸರಿಪಡಿಸಬೇಕು ಎಂದು ನಗರ ಪಾಲಿಕೆಯನ್ನು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಅವರು ಒತ್ತಾಯಿಸಿರು.