ಮೈಸೂರು: ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಚಾಮುಂಡೇಶ್ವರಿ ನಗರ ಮಂಡಲದಿಂದ ರಾಮಕೃಷ್ಣ ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆರಂಭಿಸಲಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಅಭಿಯಾನದ ವೇಳೆ ಮನೆ,ಮನೆಗಳಿಗೆ ತೆರಳಿ ಸಾರ್ವಜನಿಕರನ್ನು ಭೇಟಿಯಾಗಿ ಮಿಸ್ಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯರಾಗುವ ಬಗೆಯನ್ನು ತಿಳಿಸಿಕೊಡಲಾಯಿತು.
ಲಿಂಕ್ ಹಾಗೂ ಒಟಿಪಿ ಮೂಲಕ ಅರ್ಜಿ ಬರೆಸಿ ನೂರಾರು ಕುಟುಂಬಗಳವರನ್ನು ಸದಸ್ಯರನ್ನು ಮಾಡಲಾಯಿತು.

ಈ ವೇಳೆ ಸಾರ್ವಜನಿಕರೊಬ್ಬರು ಇದರಿಂದ ನಮಗೇನು ಪ್ರಯೋಜನ ಎಂಬ ಪ್ರಶ್ನೆಯನ್ನು ಮಂಡಲದ ಅಧ್ಯಕ್ಷ ರಾಕೇಶ್ ಭಟ್ ಅವರಿಗೆ ಕೇಳಿದರು.
ಅದಕ್ಕೆ,ಚುನಾವಣಾ ಸಮಯದಲ್ಲಿ ಮಾತ್ರ ಜನರ ಮನೆ ಮುಂದೆ ಬರುವ ಬದಲು, ಮೊದಲೇ ಅವರ ಬಳಿ ಬಂದು ಅವರ ಪರಿಚಯದ ಜೊತೆಗೆ ಅಭಿಪ್ರಾಯ ಪಡೆದು ಸ್ಥಳೀಯ ಸಮಸ್ಯೆಗಳು ಹಾಗೂ ಇತರ ವಸ್ತುಸ್ಥಿತಿ ತಿಳಿದುಕೊಳ್ಳುವುದು, ಪಕ್ಷದ ವಿಚಾರಗಳನ್ನು ತಿಳಿಸಿ ಜನರಿಗೆ ಹತ್ತಿರವಾಗಿಸುವುದು ಎಂದು ತಿಳಿಹೇಳಿದರು.
ಇತ್ತೀಚೆಗೆ ಚುನಾವಣಾ ಸಮಯದಲ್ಲಿ ಮತದಾರರಿಗೆ ಉಚಿತಗಳ ಆಮಿಷವೊಡ್ಡಿ ಮತ ಪಡೆಯುವ ಚಾಳಿ ಪ್ರಾರಂಭವಾಗಿದ್ದು, ಅದರಿಂದ ಜನರಿಗೆ ಅಗತ್ಯ ವಸ್ತುಗಳ ದರ ಹೆಚ್ಚಳ, ದುಬಾರಿ ತೆರಿಗೆ, ಸರ್ಕಾರಕ್ಕೆ ಆರ್ಥಿಕ ಹೊರೆ, ಅಭಿವೃದ್ಧಿ ಕುಂಠಿತವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಹೆಚ್.ಜಿ.ರಾಜಮಣಿ, ಬಿ.ಸಿ.ಶಶಿಕಾಂತ್, ಶಿವಕುಮಾರ್, ಕಾಂತರಾಜ ಅರಸ್, ಎಸ್.ಸಿ.ಮೋರ್ಚಾ ನಗರ ಉಪಾಧ್ಯಕ್ಷರಾದ ಎನ್.ಪ್ರತಾಪ್, ಮಂಡಲ ಕಾರ್ಯದರ್ಶಿಗಳಾದ ವಿನುತ, ಕಲಾವತಿ, ಮೋರ್ಚಾಗಳ ಪದಾಧಿಕಾರಿಗಳಾದ ಚಂದನ್ ಗೌಡ, ಚಂದ್ರಶೇಖರ ಸ್ವಾಮಿ, ಶುಭಶ್ರೀ, ರಮಾಬಾಯಿ, ನವೀನ, ಮಹಾದೇವ, ರಾಧಾ ಮುತಾಲಿಕ್, ದೇವರಾಜು, ರಾಮಕೃಷ್ಣಪ್ಪ ಹಾಗೂ ಇತರರು ಭಾಗವಹಿಸಿದ್ದರು.
ಸಾಯಿ ಬಾಬಾ ದೇವಸ್ಥಾನದ ಅರ್ಚಕರಾದ ಪ್ರಸನ್ನ ಅವರು ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಅರ್ಚನೆ ಮಾಡಿದರು.