ಲೇಖನಿ ಸಾಮಗ್ರಿ ವಿತರಿಸಿರಾಮಕೃಷ್ಣ ಪರಮಹಂಸ ಜಯಂತಿ ಆಚರಣೆ

ಮೈಸೂರು: ವಿದ್ಯಾರ್ಥಿನಿಯರಿಗೆ
ಹಣ್ಣು, ಹಂಪಲು, ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ
ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಆಚರಿಸಲಾಯಿತು.

ನಗರದ ಕೆ.ಆರ್. ಮೊಹಲ್ಲ ಬಿ.ಬಿ. ಲಾಯ ದಲ್ಲಿರುವ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿ ಅಂಗವಾಗಿ ಹಣ್ಣು, ಹಂಪಲು, ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್,ಶ್ರೀ ರಾಮಕೃಷ್ಣ ಪರಮಹಂಸರು ಭಕ್ತಿ ಮಾರ್ಗದಲ್ಲಿ ಸಾಗಿ ಕಾಳಿ ಮಾತೆಯನ್ನು ಪೂಜಿಸಿದವರು, ಸ್ವಾಮಿ
ವಿವೇಕಾನಂದರಂತಹ ಚೈತನ್ಯವನ್ನು ಜಗತ್ತಿನಾದ್ಯಂತ ಆಧ್ಯಾತ್ಮಿಕ ಪ್ರಚಾರಕ್ಕಾಗಿ ಸನ್ನದ್ದಗೊಳಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಶ್ರೀ ವಿದ್ಯಾರ್ಥಿನಿಯರ ನಿಲಯದ ಸ್ಥಾಪಕರಾದ ಪ್ರಭಾಮಣಿ, ಸುಬ್ರಮಣಿ, ಹಿರಿಯ ಕ್ರೀಡಾಪಟು ಮಹಾದೇವ,, ಛಾಯಾ,ಗಾಯಕ ಯಶ್ವಂತ್ ಕುಮಾರ್, ವೀರಭದ್ರ ಸ್ವಾಮಿ, ಮಹೇಶ್ ,ದತ್ತ, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್, ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.