ಮೈಸೂರು: ಮೈಸೂರಿನ ರಾಮಕೃಷ್ಣನಗರದ ‘ಹೆಚ್’ ಬ್ಲಾಕ್ ನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ ವತಿಯಿಂದ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಶ್ರೀರಾಮ್ ರವರು ಮಾತನಾಡಿ ಸಾಲುಮರದ ತಿಮ್ಮಕ್ಕನಿಗೆ ಅನೇಕ ಪ್ರಶಸ್ತಿಗಳು ಮುಡಿಗೇರಿವೆ, ಮಕ್ಕಳಿಲ್ಲದ ಅವರು ಮರಗಳನ್ನು ಮಕ್ಕಳಾಗಿ ಸಾಕಿ ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅವರು ನಮ್ಮನ್ನು ಅಗಲಿಲ್ಲ ಅವರು ಬೆಳೆಸಿರುವ ಮರ-ಗಿಡಗಳಲ್ಲಿ ಅವರನ್ನು ನಾವು ಕಾಣಬಹುದು. ಅವರಂತೆ ನಾವೆಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ಅವರ ಹೆಸರನ್ನು ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ ಅಧ್ಯಕ್ಷರಾದ ಎನ್. ಶ್ರೀನಿವಾಸ್ ಪ್ರಸಾದ್, ಶಿವಣ್ಣ, ಮಹೇಶ್, ಸೂರಾಪುರ ಕೃಷ್ಣ, ಹೊನ್ನ ಗಂಗಪ್ಪ,ರಾಮಕೃಷ್ಣ, ಪ್ರಸನ್ನ(ಪಾಪು) ಸಿದ್ದಲಿಂಗಸ್ವಾಮಿ.ಎಸ್ ವಿಜಯ ಮಂಜುನಾಥ್, ಪೂರ್ಣಿಮಾ ಮತ್ತಿತರರು ಹಾಜರಿದ್ದರು.
