ಮೈಸೂರು: ಸಾಮಾನ್ಯವಾಗಿ ಯುವಜನತೆ ತಮ್ಮ ಜನುಮ ದಿನವನ್ನು ಕ್ಯಾಂಡಲ್ ಹಚ್ಚಿ ಅದನ್ನ ಆರಿಸಿ ಕೇಕ್ ಕತ್ತರಿಸಿ ಸಂಬ್ರಮಿಸುತ್ತಾರೆ,ಆದರೆ ರಕ್ತದಾನಿ ಎಂದೇ ಪ್ರಸಿದ್ದರಾಗಿರುವ ರಕ್ತದಾನಿ ಮಂಜು ಅವರು ತಮ್ಮ ಹುಟ್ಟು ಹಬ್ಬವನ್ನು ರಕ್ತದಾನದ ಮೂಲಕವೇ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಕ್ತದಾನಿ ಮಂಜು ಅವರಿಗೆ 35 ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ.ಅವರು ಈ ದಿನ ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಇತ್ತೀಚಿನ ದಿನದಲ್ಲಿ ಯುವಕ ಯುವತಿಯರು ಹುಟ್ಟುಹಬ್ಬ ವನ್ನು ಸಂಭ್ರಮ ಆಚರಣೆಯಾಗಿ ಆಚರಿಸುತ್ತಾರೆ.ಅದು ಸರಿ, ದಯವಿಟ್ಟು ರಕ್ತದಾನ ಮಾಡಿ ರೋಗಿಗಳಿಗೆ ನೆರವಾಗಿ ಎಂದು ಈ ವೇಳೆ ಅವರು ಮನವಿ ಮಾಡಿದ್ದಾರೆ.
ಪ್ರತಿನಿತ್ಯ ರಕ್ತದ ಅವಶ್ಯಕತೆಗಾಗಿ ರೋಗಿಗಳು ಪರದಾಡುವುದನ್ನು ನೋಡುತ್ತಿರುತ್ತೇವೆ ಯುವಕರು ರಕ್ತದಾನ ಮಾಡುವುದರಲ್ಲಿ ಕಡಿಮೆಯಾಗಿದ್ದಾರೆ, ಕೆಲವರು ಭಯಪಡುತ್ತಿದ್ದಾರೆ, ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಆರೋಗ್ಯ ಚೆನ್ನಾಗಿದ್ದಲ್ಲಿ ಒಂದು ಹೆಜ್ಜೆ ಮುಂದೆ ಬಂದು ರಕ್ತದಾನ ಮಾಡಿದರೆ ಒಂದು ಜೀವವನ್ನು ಉಳಿಸುವಂತಹ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದು ತಿಳಿಸಿದ್ದಾರೆ.
ಸತತವಾಗಿ 4 ವರ್ಷಗಳಿಂದ ಒಂದು ಹೆಜ್ಜೆ ರಕ್ತದಾನಿಗಳ ಬಳಗ ಮೈಸೂರು ಜಿಲ್ಲೆಯಲ್ಲಿ ಕಾರ್ಖಾನೆಯ ಸ್ನೇಹಿತರು, ಕೆ ಎಸ್ ಆರ್ ಟಿ ಸಿ ಡ್ರೈವರ್ ಮತ್ತು ಕಂಡಕ್ಟರ್ ಗಳು ಪೊಲೀಸ್ ಇಲಾಖೆಯ ಸ್ನೇಹಿತರು ಜೊತೆಗೂಡಿ ರಕ್ತದಾನ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದ್ದಾರೆ.

ಜೊತೆಗೆ ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರದ ಮಾಲೀಕರಾದ ಗಿರೀಶ್ ಅವರು ಸಮಯಕ್ಕೆ ಅಗತ್ಯವಾದ ರಕ್ತವನ್ನು ಕೊಟ್ಟು ಸಹಕಾರ ನೀಡುತ್ತಿದ್ದಾರೆ, ಮಾಧ್ಯಮದವರು ಕೂಡ ಇದರ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಂಜು ಹೇಳಿದ್ದಾರೆ.
ಇಂದು ನನ್ನ ಹುಟ್ಟು ಹಬ್ಬ.ಈ ದಿನದಂದು ಮೈಸೂರಿನ ಲಯನ್ಸ್ ಸೆಂಟರ್ ಜೀವ ಧಾರದಲ್ಲಿ ಬಂದು 35ನೇ ಬಾರಿ ರಕ್ತದಾನ ಮಾಡಿದ್ದೇನೆ.ಇದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಲಯನ್ಸ್ ಬ್ಲಡ್ ಜೀವಧಾರ ಸೆಂಟರ್ ನ ನರ್ಸ್ ಗಳು ಮತ್ತು ಸಿಬ್ಬಂದಿ ಈ ವೇಳೆ ಶುಭ ಕೋರಿದರು. ಇದಕ್ಕೆಲ್ಲ ಕಾರಣಕರ್ತರಾದ ರಕ್ತದಾನಿ ದೇವರುಗಳಿಗೆ ಈ ಮೂಲಕ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದು ರಕ್ತದಾನಿ ಮಂಜು ತಿಳಿಸಿದ್ದಾರೆ.