ರಕ್ತದಾನಿ ಮಂಜು ರವರಿಗೆ ವಿಕಾಸಶ್ರೀ ಪ್ರಶಸ್ತಿ

Spread the love

ಮೈಸೂರು: ಸತತವಾಗಿ ರಕ್ತದಾನ ಮಾಡುವುದರ ಜತೆಗೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವ ರಕ್ತದಾನಿ ಮಂಜು ಅವರು ವಿಕಾಸಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲೊಬ್ಬರು ಹಾಗೂ ಆದಿಚುಂಚನಗಿರಿ ಮಠವನ್ನು ಉಳಿಸಿದ ಪ್ರಮುಖರಲ್ಲಿ ಒಬ್ಬರಾದ ದಿ. ಕೆ.ಎಚ್ ರಾಮಯ್ಯ ನವರ ಹುಟ್ಟು ಹಬ್ಬದ ಪ್ರಯುಕ್ತ
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ರಕ್ತದಾನಿ ಮಂಜು ಅವರಿಗೆ
ವಿಕಾಸಶ್ರೀ ಪ್ರಶಸ್ತಿ ನೀಡಲಾಗಿದೆ.

ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷರಾಗಿ ನಾಲ್ಕು ವರ್ಷಗಳಿಂದ 3000 ಜನಕ್ಕೆ ರಕ್ತದಾನ ಮಾಡಿಸಿರುವುದಲ್ಲದೆ ರಕ್ತದಾನಿ ಮಂಜು ಅವರು 36 ಬಾರಿ ರಕ್ತದಾನ ಮಾಡಿ ಯಶಸ್ವಿ‌ ಯಾಹಗಿರುವುದಲ್ಲದೆ ಸಮಾಜಮುಖಿಯಾಗಿ ಕೆಲಸವನ್ನು ನಿರ್ವಹಿಸುತ್ತಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಕ್ತದಾನಿ ಮಂಜು ಅವರಿಗೆ ಮೈಸೂರು ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಕಾಸಶ್ರೀ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯಧ್ಯಕ್ಷರಾದ ಎಚ್ ಎಲ್ ಯಮುನಾ, ಸಂಸ್ಥೆಯ ಗೌರವ ಅಧ್ಯಕ್ಷ ಎಚ್ ಕೆ ರಾಮು ಹಾಜರಿದ್ದರು.

ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ
ಸಿ.ಎನ್ ಮಂಜೇಗೌಡರು ನೆರವೇರಿಸಿದರು.

ವೈದ್ಯ ಸಾಹಿತಿ ಡಾ. ಎಸ್ ಪಿ ಯೋಗಣ್ಣ, ಪಿ ಜಿ ಆರ್ ಎಸ್ ಎಸ್ ಅಧ್ಯಕ್ಷರಾದ ಯಾದವ್ ಹರೀಶ್‌ ಮತ್ತು ಪದಾಧಿಕಾರಿಗಳು, ಹಲವಾರು ಗಣ್ಯರು, ಸಾಧಕರು ರೈತರು ಭಾಗವಹಿಸಿದ್ದರು.