ರಕ್ತದಾನ‌ ಮಾಡಿ ಜೀವ‌ ಉಳಿಸಿ-ರಕ್ತದಾನಿ ನೀಮಾ ಲೋಬೊ ಕರೆ

Spread the love

ಉಡುಪಿ: 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು, ರಕ್ತದಾನ ಮಾಡುವುದರಲ್ಲಿ ಗಂಡು ಹೆಣ್ಣು ಎಂಬ ಭೇದ ಇಲ್ಲ ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ತಿಳಿಸಿದ್ದಾರೆ.

ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಅನೇಕ ಕಾಯಿಲೆಗಳು ಬಾಧಿಸುತ್ತವೆ,ಆ ಸಂದರ್ಭದಲ್ಲಿ ಸರ್ಜರಿ ಮಾಡುವುದು ಅನಿವಾರ್ಯವಾದರೆ ದೇಹದಿಂದ ರಕ್ತ ಲಾಸ್ ಆಗುವುದು ಸಾಮಾನ್ಯ, ಅಲ್ಲದೆ ಅಘಾತವಾದಾಗ ರಕ್ತಸ್ರಾವ ಆಗುತ್ತದೆ ಹಾಗಾಗಿ ಈ ಎರಡೂ ಸಂದರ್ಭದಲ್ಲಿ ತುರ್ತು ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳು ಪ್ರತಿ ಮನೆಯಲ್ಲಿ ಸಂಭವಿಸಬಹುದು ನಮಗೇನು ಆಗುವುದಿಲ್ಲ ಎನ್ನುವುದು ಮೂರ್ಖತನ ಆದುದರಿಂದ 18ರಿಂದ 55 ವಯಸ್ಸಿನ ಎಲ್ಲರೂ ರಕ್ತದಾನ ಮಾಡಬಹುದು ಎಂದು ಹೇಳಿದ್ದಾರೆ.

ರಕ್ತದಾನ ಮಾಡುವವರು ಆರೋಗ್ಯವಂತರಾಗಿರಬೇಕು, ಗಂಡಸರು ಮೂರು ತಿಂಗಳಿಗೊಮ್ಮೆ ಹಾಗೂ ಹೆಂಗಸರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ರಕ್ತದಾನ ಮಾಡುವಾಗ ವೈದ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ರಕ್ತದಾನ ಮಾಡಬಹುದಾ ಅಥವಾ ಮಾಡಬಾರದಾ ಎಂಬಯದನ್ನು ತಿಳಿಸುತ್ತಾರೆ.

ಯಾವುದೇ ಸಂದರ್ಭಗಳಲ್ಲಿ ಯಾರಾದರೂ ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದರೆ ದಯವಿಟ್ಟು ರಕ್ತದಾನ ಮಾಡಿ ಎಂದು ನೀಮಾ ಮನವಿ ಮಾಡಿದ್ದಾರೆ.

ಭಾರತದಲ್ಲಿ ಹೆರಿಗೆ ಸಮಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ. ಅಂತಹ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಯಾವುದೇ ಆಗಲಿ ರಕ್ತದ ಅವಶ್ಯಕತೆ ಇದೆ ಎಂದು ಕೇಳಿದಾಗ ದಯವಿಟ್ಟು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಸಲಹೆ ನೀಡಿದ್ದಾರೆ.

ಸತತವಾಗಿ 4 ವರ್ಷಗಳಿಂದ ಮೈಸೂರಿನಲ್ಲಿ ಅಧ್ಯಕ್ಷರಾದ ರಕ್ತದಾನಿ ಮಂಜು ಅವರು ಒಂದು ಹೆಜ್ಜೆ ರಕ್ತದಾನಿ ಬಳಗ ಕಟ್ಟಿ ರಕ್ತದಾನ ಮಾಡಿಸುತ್ತಾ ಮತ್ತು ಸ್ವತಃ ರಕ್ತದಾನ ಮಾಡುತ್ತಾ ಬಂದಿದ್ದಾರೆ.

ಇದೀಗ ಉಡುಪಿ ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನ ಬಳಗವನ್ನ ಕಟ್ಟಿ ಬಳಗಕ್ಕೆ ನೀಮಾ ಲೋಬೊ ಅವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ.ಆಕೆ ಕೂಡ ಸತತವಾಗಿ 7 ಬಾರಿ ರಕ್ತದಾನ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಿಸುತ್ತಾ,ನಾನೂ ಸಹಾ ರಕ್ತದಾನ ಮಾಡುತ್ತಾ ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಕ್ತದಾನ ಮಾಡಲು ಬಯಸುವವರು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲಾ ಅಧ್ಯಕ್ಷೆ ರಕ್ತದಾನಿ ನೀಮಾ ಲೋಬೊ ಫೋನ್ ನಂ — 99021 75996 ಇದಕ್ಕೆ ಕರೆ ಮಾಡಬಹುದು‌

ಈ ನಂಬರಿಗೆ ಕರೆ ಮಾಡಿ ಹೆಸರು ಮತ್ತು ರಕ್ತದ ಗುಂಪನ್ನು ತಿಳಿಸಿ ನಮ್ಮ ಬಳಗಕ್ಕೆ ಸೇರಬಹುದು ಎಂದು, ರಕ್ತದ ಅವಶ್ಯಕತೆ ಇರುವವರು ಕೂಡಾ ಇದೇ ನಂಬರಿಗೆ ಕರೆ ಮಾಡಬಹುದು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತೇವೆ, ರಕ್ತದಾನ ಮಾಡಿ ಜೀವ ಉಳಿಸಿ ನಮ್ಮ ಜೊತೆ ಕೈಜೋಡಿಸಿ ಎಂದು
ರಕ್ತದಾನಿ ನೀಮಾ ಲೋಬೊ ಕೋರಿದ್ದಾರೆ.