(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ರಕ್ತಚಂದನ ಮರದ ತುಂಡುಗಳನ್ನು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕೊಳ್ಳೆಗಾಲ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ಟೌನ್ ನ ಆಬೀಬ್ ಪುರ ಮೊಹಲ್ಲಾದ ಟ್ರ್ಯಾಕ್ಟರ್ ಚಾಲಕ ತಬ್ರೇಜ್ ಖಾನ್ (30) ಹಾಗೂ ಮೆಹದಿನಗರದ ಸಾದಿಕ್ ಪಾಷ (26) ಬಂಧಿತ ಆರೋಪಿಗಳು.
ಈ ಆರೋಪಿಗಳು ಟಾಟಾ ಸುಮೋ ವಾಹನದಲ್ಲಿ ಆಕ್ರಮವಾಗಿ ರಕ್ತಚಂದನದ ಮರದ ತುಂಡುಗಳನ್ನು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದಾರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೆಗಾಲ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಆರಕ್ಷಕ ಉಪ ನಿರೀಕ್ಷಕ ವಿಜಯರಾಜ್ ಮತ್ತು ತಂಡ ಕೊಳ್ಳೇಗಾಲ-ಬೆಂಗಳೂರು ಮುಖ್ಯ ರಸ್ತೆಯ ಸತ್ತೇಗಾಲ ಗ್ರಾಮದ ಬಳಿ ದಾಳಿ ನಡೆಸಿದ್ದಾರೆ.
ಈ ವೇಳೆ ಟಾಟಾ ಸುಮೋ ವಾಹನದಲ್ಲಿ
7 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 205 ಕೆ.ಜಿಯ 28 ರಕ್ತಚಂದನದ ಮರದ ತುಂಡುಗಳು ಹಾಗೂ ಪ್ಲಾಸ್ಟಿಕ್ ಟಾರ್ಪಲ್ ವಶ ಪಡಿಸಿಕೊಂಡಿದ್ದಾರೆ.
ಮುಂದಿನ ಕಾನೂನು ಕ್ರಮ ಜರುಗಿಸಲು ಸ್ವಯಂ ದೂರು ತಯಾರಿಸಿ ಪ್ರಕರಣ ದಾಖಲಿಸಿ ಕೊಳ್ಳೇಗಾಲ ಬಫರ್ ವಲಯದ ಅರಣ್ಯಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ.