ಮೈಸೂರು: ಡಾ ಯತೀಂದ್ರ ಯುವ ಬ್ರಿಗೇಡ್ ವತಿಯಿಂದ ಕನಕಗಿರಿಯಲ್ಲಿರುವ ಕನಕ ಭವನ ಮುಂಭಾಗ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ 10ನೇ ವರ್ಷದ
ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ರಾಕೇಶ್ ಸಿದ್ದರಾಮಯ್ಯ ಅವರ
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಅವರು,ದಿ ರಾಕೇಶ್ ಅವರು ಚಿಕ್ಕ ವಯಸ್ಸಿನಲ್ಲೇ ಜನಸೇವೆಯ ಮೂಲಕ ಯುವಕರ ಸ್ಫೂರ್ತಿಯಾಗಿ ರಾಜ್ಯದ ವಿವಿದೆಡೆ ಲಕ್ಷಾಂತರ ಅಭಿಮಾನಗಳನ್ನು ಹೊಂದಿದ್ದರು ಎಂದು ಸ್ಮರಿಸಿದರು
ತಮ್ಮ ಪರಿಶ್ರಮ, ಸಮಾಜಮುಖಿ ಕಾರ್ಯಗಳ ಮೂಲಕ ಬೆಳೆದು ಇನ್ನೇನೂ ಒಬ್ಬ ಯಶಸ್ವಿ ರಾಜಕರಣಿಯಾಗುವ ಸಂದರ್ಭದಲ್ಲಿ ಇಹಲೋಕ ತ್ಯಜಿಸಿ ಸಾವಿರಾರು ಅಭಿಮಾನಿಗಳನ್ನು ಬಿಟ್ಟು ಹೋದತು ಎಂದು ವಿಷಾದಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ ಮಾತನಾಡಿ, ನಮ್ಮೆಲ್ಲರ ಪ್ರೀತಿಯ ರಾಖೇಶ್ ಸಿದ್ದರಾಮಯ್ಯ ದೈಹಿಕವಾಗಿ ನಮ್ಮ ಕಣ್ಣಮುಂದೆ ಇಲ್ಲದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಹಸಿರಾಗಿದ್ದಾರೆ, ಅವರ ಸ್ಮರಣೆಯಲ್ಲಿ ಪ್ರತಿವರ್ಷ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸ್ಮರಿಸಲಾಗುವುದು,
ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ನಗರ ಅಧ್ಯಕ್ಷ ಮೂರ್ತಿ, ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಚೇತನ್ ರಾಜ್, ನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್, ಶಶಿ,ಮಹೇಶ್, ದೀಕ್ಷಿತ್, ರೇವಣ್ಣ, ಕನಕಗಿರಿ ಮೊಹಲ್ಲಾ ನಿವಾಸಿಗಳದ ಮಹೇಶ್, ಪುಟ್ಟಸ್ವಾಮಿ, ಕುಮಾರ್ ನಾಯಕ್, ಆನಂದ್, ರವಿತೇಜ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮವಜ ಡಾ. ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷರಾದ ಕಂಸಾಳೆ ರವಿ ನೇತೃತ್ವದಲ್ಲಿ ನಡೆಯಿತು