ಮೈಸೂರು: ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ವೇಳೆ ಸಮಾಜ ಪರ, ಕನ್ನಡಪರ, ಜೆಡಿಎಸ್ ಪರ ಸಂಘಟನೆಗಳಲ್ಲಿ ತೊಡಗಿದ ಜೆಡಿಎಸ್ ನಗರ ಸಂಘಟನಾ ಕಾರ್ಯದರ್ಶಿ ಆಫೀಸ್ ನಾಗರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೆಗೌಡರು, ಕಾರ್ಯದರ್ಶಿ ದೇವರಾಜ್, ನಗರ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಗರ ಸಂಘಟನಾ ಕಾರ್ಯದರ್ಶಿ ಬಬಿತ,ಎಚ್ ಡಿ ಕುಮಾರಸ್ವಾಮಿ ಬಳಗದ ಅಧ್ಯಕ್ಷ ರಾಮಕೃಷ್ಣೇಗೌಡ ಬೆಲವತ್ತ,ನಗರಾಧ್ಯಕ್ಷ ಆನಂದ್ ಗೌಡ ಕೆ ಆರ್ ಮಿಲ್, ನಿರ್ದೇಶಕರು ರತ್ನಮ್ಮ ಮತ್ತು ಜೆಡಿಎಸ್ ಕಾರ್ಯಕರ್ತರಾದ ಸ್ವಾಮಿ ಗೌಡ, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
