ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಕಾರ ಸಪ್ತಾಹ, ರಾಜ್ಯೋತ್ಸವ

ಮೈಸೂರು: ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸಂಘದ ಅಧ್ಯಕ್ಷರಾದ ಎಂ ಡಿ ಗೋಪಿನಾಥ್ ಹಾಗೂ ಬ್ರಾಹ್ಮಣ ಧರ್ಮ ಸಹಾಯ ಸಭೆಯ ಚುನಾವಣೆಯಲ್ಲಿ ಆಯ್ಕೆಯಾದ ಸಂಘದ ನಿರ್ದೇಶಕರಾದ ಎಚ್.ಎಸ್ ಪ್ರಶಾಂತ್ ತಾತಾಚಾರ್(ಕಣ್ಣ) ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ನಲ್ಲಿ ಉತ್ತೀರ್ಣರಾದ ಪ್ರಿಯ ಎಸ್ ಅವರನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟ ಅಧಿಕಾರಿ ಮನು ಮಂಜುಳಾ ಅವರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು
ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಸಹಕಾರ ಸಪ್ತಹವನ್ನು ಹಬ್ಬದ ಮಾದರಿಯಲ್ಲಿ ಆಚರಿಸಬೇಕು,
ಭಾರತದ ಸಹಕಾರ ಚಳುವಳಿ ಹಲವಾರು ಸವಾಲುಗಳು ಮತ್ತು ಸ್ಪರ್ಧೆಗಳನ್ನು ಎದುರಿಸಿದರೂ ದೃತಿಗೆಡದೆ ಮುಂದುವರೆದಿದೆ, ಸಹಕಾರ ಕ್ಷೇತ್ರ ಪ್ರಗತಿ ಕಾಣುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಪ್ರಾರ್ಥನೆ ಹಾಗೂ ನಾಡಗೀತೆಯನ್ನು ನಿರ್ದೇಶಕರಾದ ನಾಗಶ್ರೀ ಎನ್ ಹಾಗೂ ಗಾಯಕ ಮಹಾಲಿಂಗ ಮತ್ತು ಮಹಿಳಾ ವೃಂದಗಾನ ತಂಡದವರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ.ಡಿ ಗೋಪಿನಾಥ್, ಉಪಾಧ್ಯಕ್ಷರಾದ ಎಂ.ಎನ್ ಸೌಮ್ಯ, ಖಜಾಂಚಿ ಕೆ ನಾಗರಾಜ, ನಿರ್ದೇಶಕ ಮಂಡಲಿ ಸದಸ್ಯರಾದ ಸಿ.ವಿ ಪಾರ್ಥಸಾರಥಿ, ಹೆಚ್. ಎಸ್. ಪ್ರಶಾಂತ್ ತಾತಾಚಾರ್ (ಕಣ್ಣ), ಹೆಚ್. ಪಿ.ಚೇತನ್, ವಿಕ್ರಂ ಅಯ್ಯಂಗಾರ್, ಎನ್ ನಾಗಶ್ರೀ, ಕೆ. ಎನ್ ಅರುಣ್, ಶಿವರುದ್ರಪ್ಪ,ಎಸ್ ರಾಜಮ್ಮ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸೊಸೈಟಿ ಸದಸ್ಯರ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.