ಎಸ್.ಎಂ.ಕೃಷ್ಣ ಅವರಿಗೆ ರಾಜ್ಯ ಒಕ್ಕಲಿಗರ ಸಂಘದಿಂದ ಶ್ರದ್ಧಾಂಜಲಿ

Spread the love

ಮೈಸೂರು: ನಾಡು ಕಂಡ ಶ್ರೇಷ್ಠ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಮೈಸೂರಿನಲ್ಲಿ ಒಕ್ಕಲಿಗ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿದವು

ಮೈಸೂರಿನ ವಿಜಯನಗರದಲ್ಲಿರುವ, ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಕೃಷ್ಣ ಅವರ ಭಾವಚಿತ್ರಗಳನ್ನು ಹಿಡಿದು ನಮಿಸಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ ಜಿ ಗಂಗಾಧರ್ ಮಾತನಾಡಿ ಎಸ್.ಎಂ.ಕೃಷ್ಣ ಅವರು ನಾಡು ಕಂಡ ಅಪರೂಪದ ದಿಟ್ಟ , ನೇರ ನಡೆಯ ರಾಜಕಾರಣಿ ಎಂದು ಬಣ್ಣಿಸಿದರು.

ಬೆಂಗಳೂರನ್ನು ಅಂತರರಾಷ್ಟೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಇವರ ಕೊಡುಗೆ ಅಪಾರ. ಸಾವಿರಾರು ಐಟಿ ಬಿಟಿ ಕಂಪನಿಗಳನ್ನು ಬೆಂಗಳೂರಿಗೆ ತಂದು ಲಕ್ಷಾಂತರ ಉದ್ಯೋಗ ನೀಡಿದರು. 2000 ಇಸವಿಯಲ್ಲಿ ರಾಷ್ಟ್ರದಲ್ಲೇ ನಂಬರ್ ಒನ್ ಮುಖ್ಯ ಮಂತ್ರಿಯಾಗಿದ್ದರು ಎಂದು ಸ್ಮರಿಸಿದರು.

ಡಾ. ಎಂ.ಬಿ ಮಂಜೇಗೌಡ ರವರು ಮಾತನಾಡಿ ಮೈಸೂರು ಬೆಂಗಳೂರು ಹೆದ್ದಾರಿ ರುವಾರಿ ಕೃಷ್ಣ ಅವರು. ಜತೆಗೆ ಮೈಸೂರು ರಿಂಗ್ ರಸ್ತೆಯ ರುವಾರಿಯೂ ಹೌದು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದರು ಎಂದು ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ರಾಜ್ಯ ಸರ್ಕಾರ ನಾಡಿಗೆ ಕೃಷ್ಣ ಅವರು ನೀಡಿರುವ ಸಮಗ್ರ ಕೊಡುಗೆಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಬಿ ಎಂ ಮಂಜು, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಶಿವಲಿಂಗಯ್ಯ, ಗೋವಿಂದೇಗೌಡ, ಲತ ರಂಗನಾಥ್, ರವಿ ರಾಜಕೀಯ, ಶೇಖರ್, ವಸಂತ ಮನೀಷ್, ಮಂಜುಳಾ ,ಲಕ್ಷ್ಮೀ, ಹೇಮಂತ್, ಭಾಗ್ಯಮ್ಮ , ಹೊಂಬೇಗೌಡ, ಮಂಜುನಾಥ್ ಹನುಮಂತಯ್ಯ ಹಾಗೂ ಹಾಸ್ಟೆಲ್ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.