ಸಚಿವ ರಾಜಣ್ಣ ವಜಾ ಪ್ರಜಾಪ್ರಭುತ್ವಕ್ಕೆ ಅಪಮಾನ:ನಂದೀಶ್ ನಾಯಕ್

Spread the love

ಮೈಸೂರು: ಸಂಪುಟದಿಂದ ಸಚಿವ ರಾಜಣ್ಣ ಅವರನ್ನು ವಜಾಮಾಡಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಕೃಷ್ಣರಾಜ ಕ್ಷೇತ್ರದ ಎಸ್ ಟಿ ಮೋರ್ಚಾ ಅಧ್ಯಕ್ಷ ನಂದೀಶ್ ನಾಯಕ್ ಹೇಳಿದ್ದಾರೆ.

ಕೆ. ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುರುವ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ನಮ್ಮ ನಾಯಕ ಸಮಾಜದ ಪ್ರಭಾವಿ ನಾಯಕರಾದ ಕೆ ಎನ್ ರಾಜಣ್ಣ ನವರ ನೇರ ನಡೆ ನುಡಿಯ ಸರದಾರನೆಂದೇ ಖ್ಯಾತಿ ಗಳಿಸಿದ್ದಾರೆ, ಅವರಿಗೆ ಏಕಾಏಕಿ ಸಚಿವ ಸ್ಥಾನದಿಂದ ವಜಾ ಗೊಳಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಸರ್ಕಾರದ ವೈಫಲ್ಯಗಳನ್ನು ನುಡಿದ್ದದ್ದೆ ರಾಜಣ್ಣ ನವರಿಗೆ ಮುಳುವಾಗಿದೆ ಎಂದು ನಾಯಕ್‌‌ ವಿಷಾದಿಸಿದ್ದಾರೆ,

ಈ ಸರ್ಕಾರ ನಮ್ಮ ನಾಯಕ ಸಮಾಜದ ಪ್ರಭಾವಿ ನಾಯಕರನ್ನು ತುಳಿಯುತ್ತಿದೆ ಮೊದಲು ಬಳ್ಳಾರಿಯ ನಾಗೇಂದ್ರ.ದಕ್ಷ ಅಧಿಕಾರಿ ದಯಾನಂದ್, ಈಗ ರಾಜಣ್ಣ ನವರು.

ಇದೆ ರೀತಿ ಮುಂದುವರಿದರೆ ನಮ್ಮ ಸಮಾಜದ ಮುಖಂಡರು,ಸಮಾಜದ ಕಾರ್ಯಕರ್ತರು ಪಕ್ಷಾತೀತ ವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಂದೀಶ್ ಎಚ್ಚರಿಸಿದ್ದಾರೆ.