ರೈಲಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ನಾಲ್ಕು ಮಂದಿ ಯುವಕರು ಅಂದರ್

Spread the love

ಮೈಸೂರು: ರೈಲಿನಲ್ಲಿ ಪ್ರಯಾಣಿಕರನ್ನು ದೋಚುತ್ತಿದ್ದ ನಾಲ್ಕು ಮಂದಿ ಯುವಕರನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು-ಬೆಂಗಳೂರು ರೈಲಿನಲ್ಲಿ ಚಿನ್ನಾಭರಣ, ಮೊಬೈಲ್ ಗಳು ಹಾಗೂ ನಗದು ಕಳವು ಮಾಡಿದ್ದ ಮೈಸೂರಿನ ಘೋಷಿಯಾ ನಗರದ ನಾಲ್ಕು ಮಂದಿಯನ್ನು
ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೈಸೂರು- ಬೆಂಗಳೂರು ರೈಲನ್ನು ನಿನ್ನೆ ಸಂಜೆ ಮೈಸೂರಲ್ಲಿ ಹತ್ತಿದ್ದಾರೆ.
ರೈಲು ಪಾಂಡವಪುರ ತಲುಪಿದ ನಂತರ ಮದ್ದೂರಿನವರೆಗೂ ಲಾಂಗು, ಮುಚ್ಚುಗಳನ್ನು ರೈಲಿನಲ್ಲಿ ಪ್ರದರ್ಶಿಸಿ ಪ್ರಯಾಣಿಕರನ್ನು ಬೆದರಿಸಿ ಮೊಬೈಲ್, ನಗದು ಹಾಗೂ ಮಹಿಳೆಯರು ಧರಿಸಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.

ನಂತರ ಖದೀಮರು ರಾಮನಗರದಲ್ಲಿ ಇಳಿದು ಪರಾರಿಯಾಗಿದ್ದರು.ಆನಂತರ ಮೈಸೂರಿಗೆ ಬರುತ್ತಿದ್ದ ರೈಲನ್ನು ಹತ್ತಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ.

ಮತ್ತೆ ರಾತ್ರಿ ಬೆಂಗಳೂರಿಗೆ ತೆರಳುವ ರೈಲನ್ನು ಹತ್ತಲು ಹೋದಾಗ, ದರೋಡೆ ವಿಷಯ ತಿಳಿದಿದ್ದ ರೈಲ್ವೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ,ಆಗ ರೈಲಿನಲ್ಲಿ ದೋಚಿದ್ದಾಗಿ ಬಾಯಿಬಿಟ್ಟಿದ್ದಾರೆ‌.

ಬಂಧಿತ ನಾಲ್ವರು ಆರೋಪಿಗಳಿಂದ ರೈಲ್ವೆ ಪೊಲೀಸರು ನಗದು, ಲ್ಯಾಪ್ ಟಾಪ್, ಮೊಬೈಲ್ ಗಳು, ಚಿನ್ನಾಭರಣವನ್ನು ವಶಪಡಿಸಿಕೊಂಡು ಆರೋಪಿ ಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಮೈಸೂರು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಚೇತನ್ ಹಾಗೂ ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.